ಕಾದಿರುವೆ ನಿನಗಾಗಿ: ಜಯಶ್ರೀ. ಜೆ. ಅಬ್ಬಿಗೇರಿ

ಪ್ರಿಯ ಹೃದಯದರಸಿಗೆ, ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ, ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು ದೂಡುತ್ತಿದ್ದ ನನ್ನ ಪಾಡು ಕಂಡ ಅಪ್ಪ,ಅವ್ವ, ಗೆಳೆಯರು, ಸಂಬಂಧಿಕರು `ಒಳ್ಳೆಯ ಕೆಲಸವಿದೆ ಕೈ ತುಂಬಾ ಸಂಬಳವಿದೆ ಯಾಕ ಸೊರಗಿ ಶುಂಠಿಯಾಗಿ? ಮದುವೆಯಾಗಿ ಆರಾಮ ಇರು`. ಎಂದು ಎಷ್ಟು ಪೀಡಿಸಿದರೂ ಜಗ್ಗಿರಿರಲಿಲ್ಲ. ಈ ಜೀವಮಾನದಲ್ಲಿ ನಿನ್ನ … Read more

ನನ್ನ ಈ ಒಲವಿನ ಪಯಣಕೆ ನಿನ್ನ ನಯನಗಳೇ ದೀವಟಿಗೆ: ಬಿ.ಎಲ್.ಶಿವರಾಜ್ ದೇವದುರ್ಗ

ಅಂದು ನಾನು ಗ್ರಂಥಾಲಯದಲ್ಲಿ ನನ್ನ ಪಾಡಿಗೆ ನನ್ನ ಇಷ್ಟದ ಪುಸ್ತಕವಾದ ಶಿವರಾಮ್ ಕಾರಂತರ “ಮೈಮನಗಳ ಸುಳಿಯಲ್ಲಿ” ಪುಸ್ತಕದ ತಲಾಶ್ ನಲ್ಲಿ ತಲ್ಲೀನನಾಗಿದ್ದೆ. ರ್ಯಾಕ್ ನಲ್ಲಿ ನನಗೆ ಬೇಕಾದ ಪುಸ್ತಕ ಕಂಡಿತು, ಅದನ್ನು ರ್ಯಾಕ್ ನಿಂದ ತೆಗೆದ ಕೂಡಲೇ ರ್ಯಾಕ್ ನ ಕಿಂಡಿಯಲ್ಲಿ ಹೊಂಬೆಳಕನ್ನು ಹೊತ್ತಿದ್ದ ತಿಳಿ ನೀಲಿ ಬಣ್ಣದ ನಿನ್ನ ನಯನಗಳು ಹೊಳೆದವು. ನೀನು ಕೂಡ ನನ್ನಂತೆ ಪುಸ್ತಕದ ಹುಡುಕಾಟದಲ್ಲಿದ್ದೆ. ಪುಸ್ತಕ ಹಿಡಿದು ಅಲ್ಲೇ ಇದ್ದ ಮೇಜಿನ ಮೇಲೆ ಓದುತ್ತಾ ಕುಳಿತೆ. ಪುಸ್ತಕದ ಮೊದಲ ಪುಟದ ಮೂರು … Read more

ಪ್ರೇಮಪತ್ರಗಳು: ನಳಿನ.ಡಿ., ಆರೀಫ ವಾಲೀಕಾರ

ನೋವು ನಿರಂತರ ಧ್ಯಾನದಂತೆ! ಆ ಹೊತ್ತು ನೀನು ಸಿಗಬಾರದಿತ್ತೇನೋ, ನೀನು ಸಿಕ್ಕು ಖಾಲಿ ಬಿದ್ದಿದ್ದ ನನ್ನ ಮೊಬೈಕ್ ನೊಳಗೆ ಪೆಟ್ರೋಲ್ ತುಂಬಿಸಲು ಬೆನ್ನ ಹಿಂದೆ ಹತ್ತಿಸಿಕೊಂಡು ಹೋದಿ. ಅಗ ಬರೀ ನನ್ನ ಗಾಡಿಯ ಎದೆಯೊಳಗೆ ಪೆಟ್ರೋಲ್ ಮಾತ್ರ ತುಂಬಿಸಲಿಲ್ಲ, ನನ್ನ ಎದೆಯ ತುಂಬಾ ನೀನೇ ತುಂಬಿಕೊಂಡೆ. ಭಾಷೆ ಗೊತ್ತಿಲ್ಲದ ಅನಾಮಿಕ ಭಾಷೆಯಲ್ಲಿ ನಾನು ನಿನ್ನನ್ನು ಕಷ್ಟಪಟ್ಟು ಇಷ್ಟವಾದದ್ದನ್ನು ಹೇಳಿದಾಗ ನೀನು ’ಥೂ, ಹೋಗಾಚೆ’ ಅಂದಿದ್ದರೆ ಸಾಕಿತ್ತು, ನೀನು ಹಾಗೆ ಮಾಡುತ್ತೀಯೇನೋ ಅಂತ ನಾನು ಎಷ್ಟು ಸಲ ನನ್ನ … Read more

“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

  ಪ್ರೀತಿಯ ಒಲವಿನ ಪ್ರಿಯಲತೆಯೇ..,   “ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ … Read more

ಮನದಭಾವುಕತೆಗೊಂದು ದಿಕ್ಕು ತೋರಿಸಿದವಳಿಗೆ: ದೊರೇಶ

           ಆಸೆ ಹುಡುಗನ ಪತ್ರವಿದು. ಅತಿರೇಕ ಅಂದುಕೊಳ್ಳಬೇಡ . ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ತನಗೆಎಲ್ಲವೂ ಬೇಕು. ಎಷ್ಟುಸಲ ತಿಳಿ ಹೇಳಿದರೂ ಕೇಳಲೊಲ್ಲದು. ನಾನು ವಿಹ್ವಲನಾಗಿ ಹೋಗಿದ್ದೇನೆ. ಕಣ್ಣಂಚಿನಲ್ಲಿ ನೆನಪಿನ ನೀರು. ಎಲ್ಲವನ್ನೂ ಹೇಳಬೇಕು ಅಂದುಕೊಂಡಿದ್ದೆ. ನನ್ನ ಮಾತು ನಿರುಪಯಕ್ತವೆನಿಸುವುದು ನಿನ್ನ ಕಣ್ಣುಗಳ ನವಿಲ ನರ್ತನ ಕಂಡಾಗ. ನಿನಗೆ ಗೊತ್ತು! ಸುಮ್ಮನೆ ಕಾಲಕಳೆಯಲೆಂದು ಸಮುದ್ರದ ದಡದಲ್ಲಿ ನಿಂತವ ನಾನು. ಅಂದು ಅಂಬೆಗಾಲಿಟ್ಟುಕೊಂಡು ಮಗುವಿನಂತೆ … Read more

“ಒಲವಿಗೊಂದು ನೆನಪಿನೋಲೆ”: ಶಿವಾನಂದ ಆರ್ ಉಕುಮನಾಳ

ಒಂದು ಸುಂದರ ಮುಂಜಾವು ಮೈಸೂರಿನ ಮೈ ಕೊರೆವ ಚಳಿಯಲ್ಲಿ ಮಾನಸ ಗಂಗೋತ್ರಿಗೆ ಹೊರಟಿದ್ದೆ ಅದು ಬಿ.ಕಾಂ. ಅಂತಿಮ ವರ್ಷದ ಮೊದಲ ದಿನ. ಎಲ್ಲಿಂದಲೋ ಹಾರಿಬಂದ ಪಾರಿವಾಳವೊಂದು ಭುಜದ ಮೇಲೆ ಕುಳಿತಿತು ಅದು ಯಾರದೆಂದು ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ. ಅದನ್ನೆತ್ತಿ ಮಣಿಕಟ್ಟಿನ ಮೇಲೆ ಕುಳ್ಳಿರಿಸಿ ನೋಡಲು ಅದರ ಎದೆಯ ಮೇಲೆ ನಯನಾ ಎಂಬ ಹೆಸರು ಮತ್ತೆ ಅತ್ತಿತ್ತ ನೋಡಲಾಗಿ ದೂರದಲ್ಲಿ ಕಂಡವಳೇ ನೀನು (ನಯನಾ). ಹತ್ತಿರಕ್ಕೆ ಬಂದು ಅದೇನನ್ನೋ ಹೇಳಿ ಆ ಪಾರಿವಾಳವನ್ನೆತ್ತಿಕೊಂಡು ಹೊರಟೇ ಹೋದೆ ಆದರೆ … Read more

ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ … Read more

ಹೃದಯದ ಬೀದಿಯಲ್ಲಿ: ಸಚಿನ್ ನಾಯ್ಕ ಅಂಕೋಲ

ಹೃದಯದ ಬೀದಿಯಲ್ಲಿ ಮಿಂಚತೆ ಹಾದು ಹೋದ ನಿನಗಾಗಿ….                                                       ನಿನ್ನವನಿಂದ…. ಸೂರ್ಯನನ್ನೇ ನುಂಗಿ ಬಿಟ್ಟ ಇಳಿಸಂಜೆಯ ನೀರವತೆ, ಹಸಿರೆಲೆಯ  ಮೈಸೋಕಿ ಮೆಲ್ಲನೆ ಹರಿಯುವ ತಂಗಾಳಿ ಹೆಪ್ಪುಗಟ್ಟಿ ಎದೆಯಲ್ಲಿ ಸಣ್ಣನೆ ನೋವು, ದೂರದಲ್ಲೆಲ್ಲೋ ಗುನುಗುವ ಹಾಡು ಯಾವ ಮೋಹನ ಮುರಳಿ ಕರೆಯಿತೋ, … Read more

ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ

ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ ನಿನಗಾಗಿ….                                                                     ನಿನ್ನವನಿಂದ…. ಕಿಟಕಿಯಿಂದ ತೂರಿ ಬರುವ ತಂಗಾಳಿ ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!! ಆಗಾಗ ಸಿಗುವ  ಹಗಲಲ್ಲೂ ಕತ್ತಲ ನೆನಪ ತರುವ ಅಷ್ಟೇ … Read more

ನಿನ್ನೆಡೆಗೆ ನೆಟ್ಟ ನನ್ನ ದೃಷ್ಟಿ ಕದಲದಿರಲಿ: ಸಚಿನ್ ನಾಯ್ಕ ಅಂಕೋಲ

ನನ್ನ ಬದುಕಿನ ಹಾದಿಯಲ್ಲಿ ನಗುವಿನ ಹೂ ಚೆಲ್ಲಿನಿಂತ  ನಿನಗಾಗಿ…..                                             ನಿನ್ನವನಿಂದ…. ಡಿಸೆಂಬರ್ ತಿಂಗಳ ಚಮುಚುಮು ಚಳಿಗಾಳಿ….. ಮೆಲ್ಲನೆ, ಹರಿವ ಸದ್ದೂ ಕೇಳದಷ್ಟು ಶಾಂತತೆ ಕಾಪಾಡಿಕೊಂಡು ಈ ನದಿ ಚಂದ್ರನ ಹಾಲು ಬೆಳಂದಿಗಳು ಜೊತೆಗೊಂದಿಷ್ಟು ನಿನ್ನ ನೆನಪುಗಳು  ಎದೆಯಲ್ಲಿ ಮಲ್ಲಿಗೆ ಬಿರಿದಂತೆ ಉಲ್ಲಾಸ ಉತ್ಸಾಹ ಅಹಾ….! ನಾನೇ ಈ ಜಗದ  ಪರಮ ಸುಖಿ…. ನಂಗೊತ್ತು ನೀನು ನೆನಪಾಗ್ತ ಇದ್ದೆ ಎಂದ್ರೆ ನಿಂಗೆ ಕೆಟ್ಟ … Read more

ಮನೆಯ ಅಂಗಳದಲ್ಲಿ ರಂಗವಲ್ಲಿ ಬಿಡಿಸಿ: ಸಚಿನ್ ನಾಯ್ಕ ಅಂಕೋಲ

ಹೃದಯದಲ್ಲಿ  ಪುಟ್ಟ ಪುಟ್ಟ ಕನಸುಗಳ ಅರಮನೆ ಕಟ್ಟಿ ಬದುಕಿನುದ್ದಕ್ಕೂ ನನ್ನೊಡನೆ ಅಲ್ಲೇ ಇರುವ ಭರವಸೆಗೆ ನಗು ನಗುತ್ತಲೇ ಒಪ್ಪಿಗೆಕೊಟ್ಟ  ನಿನಗಾಗಿ                                          ನಿನ್ನವನಿಂದ…. ನೋಡು ಹೊರಗಡೆ ; ಆಕಾಶದಲ್ಲಿ ಇಂದು ಪೂರ್ಣಚಂದ್ರ…. ನೆಲದ ಮೇಲೆಲ್ಲಾ ಅವನ ಹಾಲು ಬೆಳಕು…. ಜೀsss ಎನ್ನೋ ಮರದ ಮೇಲೆ  ಎಂದೂ ಕಾಣದಂತೆ ಅದೃಶ್ಯವಾಗೇ ಇರುವ ಜಿರಲೆಗಳ … Read more

ಒಂದು ಹಳೆಯ ಪತ್ರ: ವೀರ್ ಸಂತೋಷ್

ದಿನಾಂಕ ೧೪ ಫೆಬ್ರವರಿ ೨೦೧೩ ಪ್ರೀತಿಯ  ಹೆಸರು  ಹೇಳಲಾಗದವಳೇ/ಪಲ್ಲವಿ, ಧನ್ಯವಾದಗಳು. ಖಾಲಿ ಹಾಳೆಯಂತಿದ್ದ ನನ್ನನ್ನು ಎಲ್ಲರೂ ಓದುವಂತಹ ಕೃತಿಯನ್ನಾಗಿ ಮಾಡಿದ ನಿನಗೆ ಪ್ರೀತಿಪೂರ್ವಕ ಧನ್ಯವಾದಗಳು. ಇದು ನಾನು ನಿನಗಾಗಿ ಬರೆಯುತ್ತಿರುವ ೩೬೫ನೇ ಪತ್ರ. ನಿನ್ನೆ ಬರೆಯುವಾಗಿದ್ದ ಪ್ರೇಮ, ಅದೇ ಉತ್ಕಟತೆಯೊಂದಿಗೆ ಇದನ್ನೂ ನಿನಗೆ ಅರ್ಪಿಸುತ್ತಿದ್ದೇನೆ. ನಿನ್ನ ಭಕ್ತನ ಈ ಕಿರು ಕಾಣಿಕೆಯನ್ನು ಸ್ವೀಕರಿಸುತ್ತೀಯಲ್ಲವೇ? ಆಯ್ತು ಕೋಪ ಮಾಡ್ಕೋಬೇಡ. ಹೀಗೆಲ್ಲಾ ಹುಚ್ಚು ಪ್ರೇಮಿಯಂತೆ ಮಾತಾಡೋದು ನಿನಗೆ ಇಷ್ಟವಿಲ್ಲ ಅನ್ನೋದು ನೆನಪಿದೆ. ಅದೆಲ್ಲಾ ಒತ್ತಟಿಗಿರಲಿ. ಇವತ್ತು ಫೆಬ್ರವರಿ ೧೪. ವ್ಯಾಲೆಂಟೈನ್ಸ್ … Read more

ಖಾಲಿ ಕಿಸೆಯ ರಾಜಕುಮಾರನಿಗೆ ಕಾಗದದ ಮೇಲೆ ಮನದಾಕ್ಷರ: ಹೇಮಾ ಎಸ್.

ಮುದ್ದು ರಾಜಕುಮಾರ…. ಪ್ರೀತಿಯ ಹೊರತಾಗಿ ನಿನ್ನಿಂದ ನನಗೆ ಯಾವ ನಿರೀಕ್ಷೆಗಳು ಇಲ್ಲ. ನೀನು ಸಿರಿವಂತನಲ್ಲ ಎಂಬ ಸತ್ಯವು ಗೊತ್ತಾದ ಮೇಲೆಯೇ ನಾನು ನಿನ್ನನ್ನು ಮೆಚ್ಚಿದ್ದು. ನಿನ್ನನ್ನು ಪ್ರೀತಿಸಿದ್ದು. ನಿನ್ನಲ್ಲಿ ನನಗೆ ತುಂಬಾ ಇಷ್ಟವಾದ ಗುಣವೇನು ಗೊತ್ತಾ? ನೀನು ಇರುವುದನ್ನ ಇರುವಂತೆಯೇ ಹೇಳಿಬಿಡುತ್ತೀಯ. ಯಾವ ಮಾತಿಗೂ ಕೂಡ  ಸುಳ್ಳು ಕಪಟತೆಗಳ ಬಣ್ಣ ಲೇಪಿಸುವುದಿಲ್ಲ. ಸುಳ್ಳು ಸುಳ್ಳೇ ಆಡಂಬರದ ಮಾತುಗಳನ್ನಾಡಿ ಒಂದು ಹೆಣ್ಣಿನ ಮನವೊಲಿಸಿಕೊಳ್ಳುವ ಪ್ರಯತ್ನವನ್ನು ನೀನು ಮಾಡಲಿಲ್ಲ. ಮಾಡುವುದಿಲ್ಲ. ಇರುವುದರಲ್ಲಿಯೇ ಸಂತೃಪ್ತಿಯಿಂದ ಬದುಕುವ ನಿನಗೆ ಸೋತುಬಿಟ್ಟೆ. ನಾ ನಿನ್ನ … Read more

ಹೃದಯದ ಹಂದರದಲ್ಲೊಂದು ಸ್ನೇಹ ಸಿಂಚನಾ: ರಾಮು ಗುಂಡೂರು

                                 ಈ ನೆನಪೆ ಶಾಶ್ವತವು ಮಿಂಚಿದ ಶಾಲದಿನವು ಈ ಹಾಡು ನಮ್ಮ ಕಥೆಗೆ ಎಷ್ಟು ಸಾಮ್ಯತೆಯಿದೆಯೆಂದರೆ….? ನನ್ನ ನೆನಪಿನ ಸಂಚಿಯ ಪ್ರತಿ ನೆನಪಿಗೂ ಜೀವ ತುಂಬಬಲ್ಲ ಶಕ್ತಿಯಿದೆ ಎಂದರೆ ಅತಿಯೋಶಕ್ತಿಯಾಗಲಾರದು. ನನ್ನ ಮನದಾಳದ ವ್ಯತೆಯನ್ನು ಕಥೆಯಾಗಿ ಹೇಳುವೆ ಗೆಳತಿ ಮನಸಾರೆ ಕೇಳುವೆಯೆಂಬ ನಿರೀಕ್ಷೆಯೊಂದಿಗೆ ನನ್ನ ಪತ್ರವನ್ನು ಆರಂಭಿಸುತ್ತೇನೆ. ಡಿಯರ್ ಗೆಳತಿ ನಿನ್ನೊಂದಿಗೆ ಕಳೆದ ಶಾಲಾದಿನಗಳು ಎಷ್ಟೊಂದು … Read more

ಒಲವ ಒಳಗಣ ಮಥನ: ಸಂತೆಬೆನ್ನೂರು ಫೈಜ್ನಟ್ರಾಜ್

ನಿನ್ನ ಕಣ್ಣ ಕಡಲಲೀ…………… ನನ್ನ ಬಾಳಿದು ಬೆಳಗಲಿ, ಸರಿದು ಹೋಗೋ ಭಾವದಿ ಪ್ರೀತಿ ದೋಣಿ ತೇಲಲಿ……………………. ಇಡೀ ಪದ್ಯದಿ ಇದೊಂದು ಚರಣ ಅಲ್ವೇ ನಿಮ್ಮೆಡೆಗೆ ತಿರುಗುವಂತೆ ಮಾಡಿದ್ದು ನಿಮ್ಮ ವಿಳಾಸ ಪ್ರಕಟವಾಗಿದ್ದ ಸಾಪ್ತಾಹಿಕದಿಂದಲೇ ಪಡೆದು ನಿಮ್ಮ ಈ ಕವಿತೆಗಾಗಿ ಹಂಬಲಿಸಿ ಅಭಿನಂದನೆ ತಿಳಿಸಿದ್ದು. ಕಾಣದ ನಿಮ್ಮ ಕಾಣುವ ಬರಹದ ತನಕ ತಂದು ನಿಲ್ಲಿಸಿದ್ದು ತಿಂಗಳಿಗೆರಡರಂತೆ ನಮ್ಮ-ನಿಮ್ಮ ಪತ್ರ ವಿನಿಮಯ ಭಾವ ಬಂಧುರದ ತನಕ ತಂದು ನಿಲ್ಲಿಸಿದೆ ಕೊನೆಗೆ ಈ ಪತ್ರ ತಾನತೆ ಎಲ್ಲಿ ಒರೆಗೆ ? ನಿಮ್ಮೆಲ್ಲಾ … Read more

ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ

ಅಂದು ಮಧ್ಯಾಹ್ನ ಊಟ ಮಾಡಿ ಟಿ.ವಿ ಅನ್ ಮಾಡಿ ಕುಳಿತೆ.ಸಿಟಿ ಚಾನಲವೊಂದರಲ್ಲಿ ಕಿಚ್ಚ ಸುದೀಪನ 'ಸವಿ ಸವಿ ನೆನೆಪು' ಹಾಡು ಬರುತ್ತಿದ್ದಂತೆ ಕೆ.ಇ.ಬಿ ಯವರು ವಿದ್ಯುತ್ ಶಾಕ್ ಕೊಟ್ಟರು, ಏನ್ಮಾಡೋದು? ಅದೇ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಲಗುತ್ತಿದ್ದಂತೆಯೇ ನನಗರಿವಿಲ್ಲದಂತೆ ನನ್ನ. ಕಾಲೇಜು ದಿನಗಳ ನೆನಪುಗಳಿಗೆ ಜಾರಿಕೊಂಡೆ … ಹದಿಹರೆಯದ ದಿನಗಳು ಬಲು ಸೊಗಸು..! ಆಗಿನ ಆಕರ್ಷಣೆ-ವಿಕರ್ಷಣೆಗಳು, ಆಸೆ-ನಿರಾಸೆಗಳು, ಧಿಡೀರ್ ಬದಲಾಗುವ ಚಿತ್ತವೃತ್ತಿಗಳು, ಜಗತ್ತನ್ನೇ ಗೆಲ್ಲುವೆನೆಂಬ ಮನೋಇಚ್ಛೆಗಳು, ಸ್ನೇಹಿತರ ಒಡನಾಟಗಳು….ಹೀಗೆ ಎಲ್ಲವೂ ಅವಿಸ್ಮರಣೀಯ… 'ಹುಚ್ಚು ಕೋಡಿ … Read more

1 35+5 36 40: ಬಸವರಾಜು ಕ್ಯಾಶವಾರ

ನನ್ನ ನೆನಪ ರಾಡಿಯಲ್ಲಿ ಅವಳೊಂದು ನೈದಿಲೆ ಅತ್ತರೆ ಕಣ್ಣೀರಾಗಿ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನಗುತ್ತಲೆ ಇದ್ದರೆ ಸುಮ್ಮನೆ ತೊನೆಯುವಳು, ಕೆನೆಯುವಳು ಮತ್ತೆ ಮತ್ತೆ ಹುಟ್ಟುವಳು ನನ್ನ ನೆನಪ ರಾಡಿಯಲ್ಲಿ ಮುದ್ದು ನೈದಿಲೆ. ಇದು 1998ರಲ್ಲಿ ನೀನು ಬರೆದ ಕವನ. ಹಚ್ಚ ಹಸಿರು ಹೊಲದಲ್ಲಿ ಪುಟಾಣಿ ಹುಡುಗಿಯೊಬ್ಬಳು ಕುರಿ ಮರಿಯನ್ನು ಎತ್ತಿ ಮುದ್ದಾಡುತ್ತಿರುವ ನೀನೇ ಬರೆದ ಚಿತ್ರದ ಗ್ರೀಟಿಂಗ್ ಕಾಡರ್್ನ್ನ ಹೊಸ ವರ್ಷದ ಶುಭಾಷಯವಾಗಿ ಕೊಟ್ಟಿದ್ದೆ. ಮೇಲೆ ನೋಡಿದ್ರೆ ಹೊಸ ವರ್ಷದ ಹಾಧರ್ಿಕ ಶುಭಾಷಯಗಳನ್ನು ಅಂತಿತ್ತು. ಆದ್ರೆ … Read more

ಹೀಗೂ ಒಂದು ಪ್ರೇಮ ಪತ್ರ: ಶೀತಲ್ ವನ್ಸರಾಜ್

ಪ್ರೀತಿಯೊಂದಿಗೆ ಪೂರ್ಣತೆ ತಂದವಳೇ ,               ಅಪ್ಪ,ಅಮ್ಮ,ಕಸಿನ್ಸ್ ,ಫ್ರೆಂಡ್ಸ್ ಎಲ್ಲರೂ ಇದ್ದರೂ ಎನೋ ಒಂದು ಕೊರತೆ ಇತ್ತು ಜೀವನದಲ್ಲಿ.. ಕೇಕ್ ಮೇಲೆ ಚೆರ್ರಿ ಮಿಸ್ ಆದಂತೆ,ಕಾಫಿಯಲ್ಲಿ ಕೊಂಚ ಸಕ್ಕರೆ ಕಡಿಮೆ ಇದ್ದಂತೆ,ಸಿಂಗರಿಸಿಕೊಂಡ ಹೆಣ್ಣು ಕುಂಕುಮವಿಡುವುದ ಮರೆತರೆ ಹೀಗೆ ಏನೇನೊ ಅಪೂರ್ಣ…ನೀ ಬಂದಾಗ ಅದಕ್ಕೆಲ್ಲಾ ಪೂರ್ಣತೆ ಸಿಕ್ಕಂತೆ,ಜೀವನಕ್ಕೊಂದು ಅರ್ಥ ಸಿಕ್ಕಿತು ನೀ ನನಗೆ ಸ್ವಂತವಾದ ದಿನವೇ…ನಾವಿಬ್ಬರು ಸೇರಿ ನಡೆಸಿದ ಜೀವನ ಸರಸ -ವಿರಸಗಳೊಡನೆ  ನೀ ಕರೆಯುತ್ತಿದ್ದಾಗ ಒಮ್ಮೊಮ್ಮೆ ನನ್ನ 'ಜೀ' ಎಂದು, 'ವನ್' ಎಂಬುದು ಇರದಿದ್ದರೂ ಜೀವನವೊಂತು ಸಂಪೂರ್ಣವಾಗಿತ್ತು…ಈಗ … Read more

ಹೂಗಂಧವಿನ್ನೂ ಉಳಿದೇ ಇದೆ ಕೈ ಬೆರಳುಗಳಲ್ಲಿ

ನನ್ನ ಮುದ್ದಿನ ಚಿಟ್ಟೆ… ಏನೂ, ದುಪ್ಪಟ್ಟ ಕೊಡವಿ ನೋಡಿಕೊಳ್ಳುತ್ತಿರುವೆಯಾ? ಸಾಕ್ ಸಾಕು ಸುಮ್ನೆ ಅಟ್ಟ ಹತ್ತಿಸಿದೆ. ಆದರೂ ಪತಂಗಕ್ಕೂ ನಿಂಗೂ ತುಂಬಾನೇ ಸ್ವಾಮ್ಯ ಕಣೆ. ನಿನ್ನ ಚೆಲ್ಲುಚೆಲ್ಲಾಟ, ತರಳೆಗಳು ಪತಂಗದ ಬಣ್ಣಗಳಿಗಿಂತಲೂ ಹೆಚ್ಚು ಕಣ್ಣು ಚುಚ್ಚುತ್ತೆ. ಬಿಡು ನೀನೋ ಚಿಟ್ಟೆನ ಮೀರಿಸೋವಷ್ಟ್ ಸುಂದರಿ, ಉಬ್ಬಿಹೋಗಬೇಡ, ಅದು ನನ್ನ ಕಣ್ಣಿಗೆ ಮಾತ್ರ. ಯಾಕಂದ್ರೆ ನನ್ನ ಸ್ನೇಹಿತ ಹೇಳ್ತಿದ್ದ “ಅವಳೇನು ಚನ್ನಾಗಿದಾಳೆ ಅಂತ ಲವ್ ಮಾಡ್ತಿದಿಯೋ” ಅಂತ (ಹ್ಹಿ ಹ್ಹಿ ಹ್ಹಿ…). ಹುಂ.., ಇರಲಿ. ಹ್ಯಾಪಿ ವೆಲೆಂಟೈನ್ಸ್ ಡೇ ಬೀ … Read more

ನಿನ್ನ ಪ್ರೇಮದ ಪರಿಯ….

ಓಯ್, ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು … Read more