ನನ್ನೆದೆಯ ಒಲವಿನ ಒಡತಿಗೆ: ಡಾ.ಉಮೇಶ್

ನನ್ನೆದೆಯ ಒಲವಿನ ಒಡತಿಗೆ, ಮೂಗಿನತ್ತದ ಸಿಂಗಾರವಿಲ್ಲದಿದ್ದರೂ ಮೂಗಿನ ಮೇಲೆಯೇ ಕೋಪವೆಂಬ ಆಭರಣದ ಅಲಂಕಾರದಿಂದ ಮುದ್ದಾಗಿ ಮಿನುಗುವ ಪ್ರೀತಿಯ ಕೋಪದ ಸುಂದರಿಯೆ, ಕೋಪದ ಹೆಸರನ್ನಿಟ್ಟು ಯಾಕೆ ಕರೆಯುತ್ತಿದ್ದಾನೆ ಅಂತ ಆಶ್ಚರ್ಯವಾಗಿರಬೇಕಲ್ಲ? ನಿನ್ನ ಪೆದ್ದು ಕೋಪದಲ್ಲಿ ಅವಿತಿರುವ ನಿನ್ನ ಪ್ರೀತಿಗೆ ಸೆಳೆತಗೊಂಡವನು ನಾನು, ನನ್ನ ಪ್ರೇಮದ ಭಾವನೆಗಳನ್ನ ನೀನು ಅರಿತರು ಏನೂ ತಿಳಿಯದವಳಂತೆ ಪ್ರೀತಿಯ ಕೋಪದಲ್ಲಿ ನನ್ನ ತುಂಟ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ನೀನೆಷ್ಟು ಚೆಂದ… ನಿನ್ನ ತುಟಿಯ ಹಿಂದಿನ “ಆ” ಮಾತನ್ನು ನೀನು ಹೇಳದೆಯೇ ಬಲ್ಲವನು ನಾನು. ಆದರು … Read more

ಭಾವಭಿತ್ತಿಯಲ್ಲಿ ಅಚ್ಚೊತ್ತಿದ ಮುದ್ದೂ: ಭವಾನಿ ಲೋಕೇಶ್

ಭಾವಭಿತ್ತಿಯಲ್ಲಿ ಅಚ್ಚೊತ್ತಿದ ಮುದ್ದೂ, ಹೃದಯದೂರಿನ ಭಾವ ಬೀದಿಗಳೆಲ್ಲಬಿಕೋ ಎನ್ನುತ್ತಿವೆ ಗೆಳೆಯಇಂದು ನೀನಿಲ್ಲದೆ , ನಿನ್ನ ಬಿಸಿ ಉಸಿರಿಲ್ಲದೆ , ನಿನ್ನಕನಸಿಲ್ಲದೆ, ನಿನ್ನನ್ನೇ ನೆನೆಸಿದ ನನ್ನ ಮನಸಿಲ್ಲದೆ. . ಒಲವೇ, ಬೇಡ ಬೇಡವೆಂದರೂ ಕೇಳದೆ ನನ್ನ ಮನಸ್ಸು ಲೇಖನಿಯಲ್ಲಿ ಭಾವನೆಗಳ ಚಿತ್ರ ಬಿಡಿಸೋಕೆ ಹೇಳಿ ಒತ್ತಾಯದಿಂದ ಕೂರಿಸಿದೆ. ಈಗ ರಾತ್ರಿ 12.00 ಗಂಟೆ. ನಿದ್ರೆ ಕಣ್ಣೆವೆಗಳನ್ನು ಮುತ್ತಿಡುವ ಸಮಯ. ಆದರೂ ಅದರ ಸುಳಿವೇ ಇಲ್ಲದಂತೆ ಮಾಡಿಬಿಟ್ಟಿದೆ ನಿನ್ನ ನೆನಪು. ಅದರ ಒನಪು. ನಿನಗೆ ಗೊತ್ತಿದೆ ನಾನು ಭಾವುಕ ಜೀವಿ.. … Read more

ಪಿಜ್ಜಾ ಹುಡುಗಿಗೆ: ವಿಜಯ್ ದಾರಿಹೋಕ

ನನ್ನ ಪ್ರೀತಿಯ ಪಿಜ್ಜಾ ಹುಡುಗಿಗೆ,ಸದಾ ಅಂತರಂಗದಲ್ಲಿ ಸ್ಫುರಿಸುತ್ತಿರುವ ಪ್ರೇಮ, ವ್ಯಾಲೆಂಟೈನ್ಸ್ ಡೇ ಬರುವ ಹೊತ್ತಿಗೆ ಅಕ್ಷರ ರೂಪದಲ್ಲಿ ಇಣುಕುವ ಹಂಬಲ ತೋರುತ್ತಿದೆ. ಹಿಂದೆಲ್ಲ ಪ್ರೇಮ ಪತ್ರಗಳನ್ನು ಬರೆದು ಪಾರಿವಾಳ ಇಲ್ಲವೇ ದೂತನ, ಅಂಚೆ ಮಾಮನ ಮೂಲಕ ತಲುಪಿಸುತ್ತಿದ್ದುದನ್ನು ನೀನು ಕೇಳಿಯೇ ಇರುತ್ತಿ.. !.. . ಈಗೆಲ್ಲ, ಕೆಲ ವರ್ಷಗಳಿಂದ ಎಂದಿನಂತೆಯೇ ನಾನು ನಿನ್ನ ವಾಟ್ಸಪ್ಪ್ ನಂಬರಿಗೆ ನೇರವಾಗಿ ಕಳಿಸುತ್ತಿರುವೆ…. . ! ಒಮ್ಮೆ ಓದಿ ನೋಡು.. ಆ ದಿನ ಸ್ಪಷ್ಟವಾಗಿ ನೆನಪಿದೆ. ವೀಕೆಂಡ್ ನ ಶುಕ್ರವಾರದ ಸಂಜೆ … Read more

ಹಚ್ಚಿಟ್ಟ ಒಲವಿನ ಹಣತೆ: ಪಲ್ಲವಿ ಬಿ ಎನ್.

ಲೋ ಕರಿಯ, ಹೀಗೆ ಅಲ್ಲವೆ ನಿನ್ನನ್ನು ನಾನು ಅಂದು ಕರೆಯುತ್ತಿದ್ದು. ಗೋದಿ ಬಣ್ಣದ ನೀನು ಅದೆಷ್ಟು ಕೋಪಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನ ಅರ್ಥೈಸಲು, ವ್ಯಾಖ್ಯಾನಿಸಲು ನನಗೆ ಬರುವುದಿಲ್ಲ ಆದರೆ ನಿನ್ನ ಮೇಲಿನ ಪ್ರೀತಿಯಲ್ಲಿ ಒಡಮೂಡುವ ನಾನಾ ಪರಿಯ ಬಯಕೆ, ಹಂಬಲಗಳನ್ನ ನಿರೂಪಿಸಬಲ್ಲೆ. “ಇಂದು ನಾನು ನನ್ನ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುತ್ತೇನೆ” ಎಬೊಂದು ಅಸ್ಥಿರವಾದ ಸಾಲನ್ನೇಳಿಕೊಂಡು ಮಧುರ ಮುಂಜಾವಿಗೆ ಹೆಜ್ಜೆ ಇಡುತ್ತಿದ್ದ ನನ್ನನ್ನ ಹಾದಿ ತಪ್ಪಿಸಿ ನಿನ್ನ ನೆನಪೆ ಸುಮದುರ ಶುಭಾಶಯ ಕೊರುವ ಹಾಗೆ ಮಾಡುಬಿಟ್ಟೆಯಲ್ಲ ಕರಿಯ. ನನ್ನ ನಿನ್ನ … Read more

ಕನಸೆಂದರೆ ಅದು ನೀನೆ ತಾನೇ?: ಸರಿತಾಮಧುಕುಮಾರ್

ಪ್ರೀತಿಯ ಹನಿ (ಮಧು), ಮೊದಲ ಪ್ರೇಮ ಪತ್ರ ಬರೆಯೋ ಅವಕಾಶವೇ ಇರಲಿಲ್ಲ ನನಗೆ. ಕಾರಣ ಸದಾ ಜೊತೆಯಲ್ಲಿ ನನ್ನೊಂದಿಗೆ ನೀನಿದ್ದೆಯಲ್ಲ. ಅದು ನಿನಗೂ ಗೊತ್ತು. ಏನೆಂದು ಹೇಳಲಿ ನಲ್ಲ ಮೊದಲ ಭೇಟಿಯ ತವಕ ನನಗಿಂತಲೂ ನಿನಗೇ ಹೆಚ್ಚಿತ್ತು, ಅಲ್ವಾ? ನಮ್ಮ ಭೇಟಿ ನಿರೀಕ್ಷಿತವಾಗಿದ್ದರೂ ಅದು ವಿಶೇಷ ವಾಗಿತ್ತು. ಅದಕ್ಕಾಗಿ ನೀನು ಚಾತಕಪಕ್ಷಿಯಂತೆ ಕಾದಿದ್ದು ನನಗೆ ತಿಳಿದಿದೆ. ಹೀಗಂತ ಅದೆಷ್ಟೋ ಸಲ ನನ್ನ ಬಳಿ ಹೇಳಿದರೂ ಮತ್ತೆ ಮತ್ತೆ ಕೇಳುವಾಸೆ ಈ ಹೃದಯಕೆ. ನೀನಾಡಿದ ಮಾತು ಪ್ರತಿಧ್ವನಿಸುತ್ತಿದೆ , … Read more

ಮನಸ್ಸಿನಾಳದ ಪ್ರೀತಿ: ನಾಗರತ್ನಾ ಗೋವಿಂದನ್ನವರ.

ಜೀವದ ಗೆಳೆಯಾ, ನೀನು ಹೇಗಿರುವೆ? ಬಾಲ್ಯದಿಂದ ಸ್ನೇಹಿತೆಯಾಗಿದ್ದವಳು, ಪ್ರೇಮಿಯಾಗಿ, ಬದುಕಿಗೆ ಬಾಳ ಸಂಗಾತಿಯಾಗಿ ನಿನ್ನನ್ನು ಅದೆಷ್ಟು ಹಚ್ಚಿಕೊಂಡಿರುವೆ, ನೀನಂದ್ರೆ ನಂಗೆ ಅದೆಷ್ಟು ಇಷ್ಟಾ ಎಂದು ಹೇಳೋಕೆ ಶಬ್ದಗಳಿಲ್ಲಾ. ಒಂದೆ ಮಾತಲ್ಲಿ ಹೇಳುವುದಾದರೆ ನನ್ನ ಹೃದಯದಲ್ಲಿ ಮೊಳಕೆಯೊಡೆದ ಮೊದಲ ಹಾಗೂ ಕೊನೆಯ ಪ್ರೀತಿ ನೀನು. ನನ್ನ ತುಂಟಾಟಗಳು ಕೆಲವೊಂದು ಸಲ ನಿನಗೆ ಇಕ್ಕಟ್ಟಿಗೆ ಸಿಲುಕಿಸಿದ್ದು ನಿಜ, ಆಗ ಮದುವೆಯಾದ ಮೇಲಾದರೂ ನಿನ್ನ ತುಂಟತನ ಬಿಡು ಎಂದು ಹುಸಿಮುನಿಸು ತೋರಿದ್ದೆ. ಮದುವೆಯಾದ ಮೇಲು ಪ್ರೇಮಿಗಳಾಗಿಯೆ ಇರಬೇಕು ಎಂದಿದ್ದೆ ಅದಕ್ಕೆ ನೀನು … Read more

ನೀನು ವಂಚಕಿ ಅಲ್ಲ, ಮೋಸಗಾತಿ ಅಲ್ಲ, ನಿರ್ದಯಿ ಹೆಣ್ಣಲ್ಲ, ನೀನೊಬ್ಬಳು ಮಾಟಗಾತಿ ಅಲ್ಲ…: ರವಿ ಶಿವರಾಯಗೊಳ

ಪ್ರೀತಿಯ? ಹುಡಗಿ. ನಾನಿಲ್ಲಿ ಕ್ಷೇಮವೋ! ಅಲ್ಲವೋ! ನಿನಗೆ ತಿಳಿಯದ ವಿಷಯ. ಆದರೂ ನಾನು ಕ್ಷೇಮ. ನೀನು ಹೋದ ಮರುಗಳಿಗೆಯಿಂದ ಒದ್ದಾಡಿದೆ , ಚಡಪಡಿಸಿದೆ, ಊಟ ಸೇರಲಿಲ್ಲ , ನಿದ್ದೆ ಬರಲಿಲ್ಲ, ಹಿಮಾಲಯದ ಸನ್ಯಾಸಿಯಂತೆ ಮುಖದ ತುಂಬೆಲ್ಲಾ ಗಡ್ಡ ಬೆಳೆದವು, ನೀರು ಕಾಣದ ಮುಖ ಕಪ್ಪಿಟ್ಟಿತು, ನನ್ನ ನೋಡಿದವರು ಹುಚ್ಚನೆಂದರು, ಇನ್ನೂ ಕೆಲವರು ಅನಾಥನೆಂದರು, ಉಳಿದವರು ಮಾನಸಿಕ ಅಸ್ವಸ್ಥನೆಂದರು. ಆದರೆ ನಾನೇನಾಗಿದ್ದೆ ? ಉಹುಂ ನನಗೂ ತಿಳಿಯದು. ಅವರೆಲ್ಲರೂ ಕೊಟ್ಟ ಸರ್ಟಿಫಿಕೇಟ್ ನಲ್ಲಿ ಯಾವುದಾದರೂ ಒಂದು ವ್ಯಕ್ತಿತ್ವ ಇರಬಹುದೇನೋ! … Read more

ನಿಮ್ಮ ಧ್ವನಿ ಕೇಳದ ಒಂದೊಂದು ಕ್ಷಣವೂ: ಚೇತನ್‌ ಬಿ ಎಸ್.‌

ಎಲ್ಲರೂ ನನ್ನ ಬಹಳ ಮಾತುಗಾರನೆನ್ನುತ್ತಾರೆ ಆದರೆ ಅದೇಕೊ ಗೊತ್ತಿಲ್ಲ ನಿಮ್ಮನ್ನು ಕಂಡೊಡನೆ ಹೃದಯದಲ್ಲಿ ಕಂಪನಗಳು ಶುರುವಾಗಿಬಿಡುತ್ತವೆ. ಅದ್ಯಾವುದೋ ಆತಂಕ, ಹೇಳಿಕೊಳ್ಳಲಾಗದ ಭಯ ಆವರಿಸಿ ಮನಸು ತನ್ನ ಸ್ಥಿಮಿತವನ್ನೇ ಕಳೆದುಕೊಂಡು‌ ಮೌನಕ್ಕೆ ಶರಣಾಗಿಬಿಡುತ್ತಿದೆ. ಅತ್ತ ಹೇಳಲಾಗದೆ ಇತ್ತ ಸುಮ್ಮನಿರಲಾರದೆ ಚಡಪಡಿಸುತ್ತಾ ಉಳಿದ ಮಾತುಗಳೆಲ್ಲಾ ದಿನೇ ದಿನೇ ಹೃದಯವನ್ನು ಭಾರವಾಗಿಸುತ್ತಾ ಹೋಗಿವೆ. ಹಾಗಾಗಿಯೇ ಈ ಪತ್ರದ ಮೂಲಕ ನನ್ನ ಮನದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ನೀವು ಸುಸಂಸ್ಕೃತ ಕುಟುಂಬದಿಂದ ಬಂದವರು. ಈ ಪತ್ರ ಕಂಡೊಡನೆ ನಿಮಗೆ ಕೋಪ ಬರಬಹುದು ಅಥವಾ … Read more

ನಿನ್ನ ಮಧುರ ಮಾತುಗಳ ಅಮಲಲ್ಲಿ: ಮನೋಹರ್‌ ಜನ್ನು

ಪ್ರಿಯೆ, ಬೆಳ್ಳಿ ಮೋಡದ ಮರೆಯಲ್ಲಿ ಹಪಹಪಿಸೋ ಚೆಂದ್ರಮನ ಹಾಗೆ, ಆ ನೀಳ ಗಗನದಲ್ಲಿ ಹೊಳೆವ ಚೆಂದ್ರನ ಹಾಗೆ ನಿನ್ನ ಹಣೆಯ ಕೆಂಪುಬಿಂದು ಮೈ ಪುಳಕಿತ ಗೊಳಿಸುತ್ತಿದೆ. ಮನ ಮಿಂಚುವ ಕೋಲ್-ಮಿಂಚಿನ ಥರ ಸದ್ದು ಮೊಳಗಿಸುತ್ತಿದೆ. ನಿನ್ನ ನಗುವಿನ ನೆನಪಲ್ಲಿ ಹಲ್ಲುಗಳ ಹೊಳಪು ಮನಸ್ಸನ್ನು ಉತ್ತೇಜಿಸುತ್ತಿದೆ. ಅಗಲಿಕೆ ಜೀವ ಹಿಂಡುತ್ತಿದೆ. ಅಂದು ಮೊದಲಸಲ ತುಂಬಿದ ಜಾತ್ರೆಯಲ್ಲಿ ನೀನು ನನ್ನ ಕಂಡು ಮಿಂಚುಳ್ಳಿಯಂತೆ ಮರೆಯಾದಾಗ ಹೃದಯ ರೋಧನದಲ್ಲಿ ನರಳಿತ್ತು ಗೆಳತಿ! ಮತ್ತೆ ಮತ್ತೆ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಅದು ನೀನೆ … Read more

ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ: ದಿನೇಶ್‌ ಉಡಪಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಲ್ಮೆಯ ಗೆಳೆಯ,ಸುಮಾರು ದಿನಗಳಿಂದ ಹಗಲು ರಾತ್ರಿಗಳ ಪರಿವೆಯಿಲ್ಲದೇ, ಹೇಳಬೇಕೋ ಬೇಡವೋ? ಎಂಬ ತೊಳಲಾಟದಲ್ಲಿ ಬಳಲಿ, ಹೇಳಲೇಬೇಕಾದದ್ದು ಏನಾದರೂ ಇದೆಯಾ? ಹೇಳಲೇ ಬೇಕಾ? ಹೇಳಿದರೆ ಏನಾಗಬಹುದು? ಹೇಳದೆ ಇದ್ದರೆ ಏನಾಗಬಹುದು? ನಾನೀಗ ಹೇಳಬೇಕಾಗಿದೆಯಾ? ಅಥವಾ ಕೇಳಬೇಕಾಗಿದೆಯಾ? ಎಂಬ ಉತ್ತರವೇ ಇಲ್ಲದ ಪ್ರಶ್ನೆಗಳ ಕಾಡಲ್ಲಿ ಸಿಲುಕಿ, ದಿಕ್ಕು ತಪ್ಪಿ ಕೊನೆಗೆ ಏನಾದರೂ ಆಗಲಿ, ಆಗದೆ ಆದರೂ ಇರಲಿ ಎಂಬ ನಿರ್ಧಾರಕ್ಕೆ ಬಂದು, ನಡುಗುವ ಕೈಗಳಿಂದ ಈ ಪತ್ರ ಬರೆಯುತ್ತಿದ್ದೇನೆ. … Read more

ನಿಮ್ಮ ನೋಡಲೆಂದೇ ನಾನು ಚರಂಡಿಗೆ ಬಿದ್ದಿದ್ದು ರೀ..: ನರೇಂದ್ರ ಎಸ್ ಗಂಗೊಳ್ಳಿ.

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಮಸ್ತೆ ಪ್ರತೀಕ್ಷಾ ಮೇಡಂ,ನನ್ನ ಪರಿಚಯ ಖಂಡಿತಾ ನಿಮಗೆ ನೆನಪಿರಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವಮಾನದಲ್ಲಂತೂ ನಿಮ್ಮ ನೆನಪನ್ನು ಬಿಡಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ಇದು ನಿಮಗೂ ಗೊತ್ತಿರಲಿ ಅಂತಂದುಕೊಂಡು ಈ ಪ್ರೀತಿಯ ಪತ್ರ ಬರೆಯುತ್ತಿದ್ದೇನೆ. ಅಸಲಿಗೆ ಮೂರು ಕತ್ತೆ ವಯಸ್ಸು ಅಂತಾರಲ್ಲಾ ಅಷ್ಟಾಗುತ್ತಾ ಬಂದರೂ ಮದುವೆ ಅಂದರೆ ದೂರವೇ ನಿಲ್ಲುತ್ತಿದ್ದವನು ನಾನು. ಅದೇಕೋ ಏನೋ ಹೊಸದೊಂದು ಜವಾಬ್ದಾರಿ ಯಾಕೆ ತಗೋ ಬೇಕು? ಈಗಿರುವ ಅದ್ಭುತ … Read more

ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ: ಕಪಿಲ ಪಿ ಹುಮನಾಬಾದೆ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಲಾಸ್ಟ್ ಬೆಂಚ್ ಹುಡುಗಿಗೆ, ನಿನ್ನ ನಿರಾಕರಣೆಯ ನೋಟದಲ್ಲಿಯೂ ಸಹ ಪ್ರೀತಿಗೆ ಚಡಪಡಿಸುತ್ತಿರುವ ಜೀವವೊಂದರ ಮಾತುಗಳಿವು. ನೀನು ಕೂತೆದ್ದು ಹೋದ ಬೆಂಚಿನ ಮೇಲೆ, ಕ್ಲಾಸ್ ರೂಮ್ ಪೂರ್ತಿ ಖಾಲಿ ಆಗಿದ್ದಾಗ ನಾನು ಹೋಗಿ ಕೂತು ಬೆಚ್ಚನೆಯ ಸ್ಪರ್ಶವೊಂದು ಅನುಭವಿಸಿದ್ದೇನೆ. ಮೊನ್ನೆ ಮುಂಜಾನೆ ಯುನಿವರ್ಸಿಟಿಯ ಮೇನ್ ಗೇಟಿನ್ ರಸ್ತೆಯಲ್ಲಿ ನೀನು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದೆ, ಗರಿ ಬಿಚ್ಚಿ ನಿಂತ ಆ ನಿನ್ನ ಹಸಿ ಕೂದಲುಗಳಲ್ಲೊಮ್ಮೆ ನನ್ನುಸಿರು ಸುಳಿದಾಡಿ ಬಂದಂತೆ … Read more

ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ: ಸುಜಾತಾ ಲಕ್ಮನೆ

ಹಾಯ್ ದೊರೆ, ಎಲ್ಲಿಂದ ಶುರು ಮಾಡಲಿ? ಅದೇ ನೀ ಸಿಕ್ಕ ದಿನ ಕಣ್ಣ ಚುಂಗಲ್ಲಿ ನೀ ಎಸೆದ ಒಲವ ನೋಟವ ಪೋಣಿಸಿ ಎದುರಿಡಲೇ ಅಥವಾ ಕಳೆದ ಸವಿ ಕ್ಷಣಗಳ ನೆನಪ ನೇಯಲೇ? ಸುಂದರ, ಸಂತಸಮಯ ಕ್ಷಣಗಳು ದಿನದುದ್ದಕ್ಕೂ ಕಾಡಿ ಕಚಗುಳಿಯಿಡುವಾಗ ಮೈ ರೋಮಾಂಚನಗೊಳ್ಳುವ ಆ ಭಾವವನ್ನು ವರ್ಣಿಸೋದು ಹೇಗೆ? ಆ ದಿನಗಳಲ್ಲಿ ಭಾವಗಳು ತುಂಬಿ ತುಳುಕಿತ್ತು! ಎಲ್ಲ ಪೂರ್ಣವೂ ಚಂದ ನೋಡು. ಪೂರ್ಣ ಚಂದಿರ, ಆಡಿ ಮುಗಿವ ಮಾತಿನ ನಂತರದ ತುಂಬು ಮೌನ, ಕಣ್ತುಂಬುವ ನೋಟ; ಬೀಸಿ … Read more

ನಿನಗೆ ನನ್ನ ಮೇಲೆ ಒಲವಿದ್ದರೆ: ಪರಮೇಶ್ವರಿ ಭಟ್

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಪ್ರಿಯ ಮಧುರಾ, ನಿನಗೆ ಯಾರಿವನು ಅಂತ ಆಶ್ಚರ್ಯ ವಾಗಬಹುದು. ನಾನು ನಿನ್ನನ್ನು ಮೆಚ್ಚಿದ ಒಬ್ಬ ಸುಸಂಸ್ಕೃತ ಹುಡುಗ. ಹೆದರಬೇಡ. ಪತ್ರವನ್ನು ಪೂರ್ತಿ ಓದು. ನಾನು ಒಬ್ಬ ಸಂಶೋಧನ ವಿದ್ಯಾರ್ಥಿ. ನೀನು ಕೂಡ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಿ ಎಂದು ತಿಳಿದುಕೊಂಡೆ. ನನ್ನ ನಿನ್ನ ಆಕಸ್ಮಿಕ ಭೇಟಿ ನಾನು ಮರೆತಿಲ್ಲ. ಈ ಪತ್ರ ಬರೆಯಲು ಅದುವೇ ನಾಂದಿಯಾಯಿತು ಗೊತ್ತಾ? ಹೇಗೆ ಅಂತೀಯಾ.. ಒಂದು ದಿನ ಲೈಬ್ರರಿಯಲ್ಲಿ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿಕಾರಾಣಿ, ಯಲ್ಲಾಪುರ ಅವರ ಪ್ರೇಮ ಪತ್ರ

ಪ್ರಿಯ ಸಖಾ, ನಿನ್ನದೊಂದು ಸಾದಾ ಸೀದಾ ಮುಗುಳುನಗೆ ʻಪ್ರಿಯ ಸಖಾʼ ಎನ್ನುವ ಆಪ್ತತೆ ಒದಗಿಸಿತೆನಗೆ! ನಾನರಿವೆ, ನಿನಗಿದಚ್ಚರಿಯೇ. ಆ ಕಣ್ಣ ಹೊಳಪಲ್ಲಿ ಜಗವ ನೋಡುವ ಬೆರಗ ಕಂಡೆ. ಇನ್ನೇನು ಬೇಕೆನಗೆ ನಿನ್ನ ಮೋಹಕ್ಕೆ ಜಾರಲು? ಮೊನ್ನೆ ಮೊನ್ನೆವರೆಗೂ ತೀರಾ ಸಾಮಾನ್ಯ ಹುಡುಗಿ ನಾನು. ವಿಪರೀತ ಮಾತಿನ ಚಟದವಳು, ಮಕ್ಕಳಂತೆ ಚಲ್ಲಾಟವಾಡುತ್ತಾ, ಮನೆಯಲ್ಲಿ ಕಿವಿ ಹಿಂಡಿಸಿಕೊಂಡು, ಸ್ನೇಹ ಬಳಗದಲ್ಲಿ ಚೇಷ್ಟೆ ಮಾಡುತ್ತಾ ಹಾರಾಡಿಕೊಂಡಿದ್ದವಳು. ಅಚಾನಕ್ಕಾಗಿ ನಿನ್ನ ಮಾಯೆಗೆ ಮೌನಿಯಾಗಿಬಿಟ್ಟೆ! ಅರ್ಥವಾಗದ ಖುಷಿಯೂ ಜೊತೆಯಾಗಿದೆ. ಹರೆಯದ ಹುಡುಗಿಯೊಬ್ಬಳು ಪ್ರೇಮ ಪತ್ರ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಸುಕೃತಿ ಕೆ ಪೂಜಾರಿ ಅವರ ಪ್ರೇಮ ಪತ್ರ

ನನ್ನ ಪ್ರೀತಿಯ ಇನಿಯ. ಹೇಗಿದ್ದೀಯಾ? ಹೊರ ನೋಟಕ್ಕೆ ಚೆನ್ನಾಗಿದ್ದೀನಿ ಅಂತಿಯಾ. ಅಂತರಂಗದ ಅಳಲು ನನಗೆ ಗೊತ್ತಿದೆ ಕಣೋ. ಯಾಕಂದ್ರೆ ನನ್ನ ಜೀವದ ಉಸಿರಿನ ಬಗ್ಗೆ ನನಗೆ ಗೊತ್ತಿಲ್ಲದೇ ಇರುವುದೇ? ಹೌದು. ನಾ ಈ ಪತ್ರ ಯಾಕೆ ಬರೆಯುತ್ತಿದ್ದೇನೆಂದು ನಾನರಿಯೇ. ಇದು ಅಮೂಲ್ಯ ಪ್ರೇಮದ ನಿವೇದನೆಯೋ? ಅಂತರಂಗದ ವಿರಹದ ವೇದನೆಯೋ? ಮನದ ಮೂಲೆಯಲ್ಲಿ ಹೇಳಲಾಗದೇ ಉಳಿದಿಹ ಅವೆಷ್ಟೋ ಭಾವನೆಗಳಿಗೆ ಇಲ್ಲಿ ಅಕ್ಷರ ರೂಪ ನೀಡುತ್ತಿದ್ದೇನೆ. ಒಮ್ಮೆ ಓದಿ ಬಿಡು ಬಂಗಾರ. ಅಂದು ನಾನ್ಯಾರೋ. ನೀನ್ಯಾರೋ! ಬಂಧು- ಬಾಂಧವರ ಸಮ್ಮುಖದಿ … Read more

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಶರಣಬಸವ ಕೆ.ಗುಡದಿನ್ನ ಅವರ ಪ್ರೇಮ ಪತ್ರ

ನೀ ಇಲ್ಲದ ಈ ಘಳಿಗೆ. . ಈ ಸಮಯದಲ್ಲಿ ನಿನಗೆ ಪ್ರೇಮಪತ್ರ ಬರೆಯಬಹುದಾ? ಗೊತ್ತಿಲ್ಲ! ಈ ಪ್ರೇಮ ಪತ್ರ ನಿನಗೆ ತಲುಪಿಸುವ ಬಗೆಯೂ ನನಗೆ ಸ್ಪಷ್ಠವಿಲ್ಲ. ಅದೆಷ್ಟು ದಿನವಾಯಿತೊ ನಿನ್ನ ಮೊಬೈಲ್ ನಂಬರನ್ನು ದ್ಯಾಸ ಮಾಡಿಕೊಂಡು ಮೊಬೈಲಿನ ಮುಖದ ಮೇಲೆ ಡಯಲ್ ಮಾಡಿ. ಒಂದೇ ಒಂದು ಮೆಸೇಜು ಕೂಡ ಇತ್ತೀಚಿಗೆ ನಮ್ಮ ಮದ್ಯೆ ಹರಿದಾಡಿಲ್ಲ. ನನ್ನ ಅಂದಾಜು, ಮಾಡಿಕೊಂಡ ಬಾಯಿಲೆಕ್ಕ ಸರಿಯಿದ್ದರೆ ನಿನಗೀಗ ಭರ್ತಿ ಒಂಭತ್ತು ತಿಂಗಳು! ಘಳಿಗೆಗೊಂದು ಸಲ ನೀವಿಕೊಳ್ಳುತ್ತಿದ್ದ ಸೀರೆಯ ಬಣ್ಣದ ನೆರಿಗೆಗಳೇ ಉಳಿಯದಷ್ಟು … Read more

ನೀನೆಂಬ ವಿಸ್ಮಯ: ಶ್ರುತಿ ಬಿ.ಆರ್.

ಓಯ್ ತಿಂಡಿ ಪೋತಿ, ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲೆ, ನೆನಪಾದಾಗಲೆಲ್ಲ ನನ್ನ ಮುಖದ ಮೇಲೆ ಹಾದು ಹೋಗುವ ಸಣ್ಣ ನಗು, ನಿನ್ನತ್ತಲೇ ಎಳೆಯುವ ಹುಚ್ಚು ಮನಸ್ಸು, ನಿನಗೆ ಹೇಳಬೇಕಾಗಿರೋದನ್ನು ಹೇಳಲು ಸಹಕರಿಸದ ಹೇಡಿ ಮಾತುಗಳು, ಆದರೆ ಇನ್ನೂ ನಾನು ತಡಮಾಡಬಾರದೆಂದು ಎಚ್ಚರಿಸುತ್ತಿರುವ ಬುದ್ಧಿ, ಇದೆಲ್ಲವೂ ಸೇರಿ ಪತ್ರವೇ ಸರಿಯಾದ ಮಾರ್ಗ ಅಂತ ಅನ್ನಿಸಿದೆ ಕಣೆ. ಚೆನ್ನಾಗಿ ತಿಂದು ಬಂದಿರುವುದಕ್ಕೆ ಸಾಕ್ಷಿಯಾಗಿ ಇರುವ ಯಾವಾಗಲೂ ಲವಲವಿಕೆಯಿಂದ ಕೂಡಿದ ನಿನ್ನ ನಗುಮುಖ, ಲಾಡುವಿನಂತೆ ಕೆನ್ನೆ, ಲಾಡುವಿನ ಮೇಲಿನ ದ್ರಾಕ್ಷಿಯಂತೆ ಕೆನ್ನೆಯ ಮೇಲಿನ … Read more

ಪ್ರೇಮದ ಕಾಲ್ಪನಿಕ ಕೊಳದಲ್ಲಿ: ಮಸಿಯಣ್ಣ ಆರನಕಟ್ಟೆ

ಒಲವಿನ ಆತ್ಮದೊಡತಿಗೆ, ನನ್ನುಸಿರ ಅರ್ಪಣೆಯು, ನನ್ನಾತ್ಮದ ನುಡಿಗೆ ಅರ್ಥವೇನೊಂದಿಲ್ಲ; ಅದರಿಂದ ನೀನು ಅರ್ಥ ಮಾಡಿಕೊಳ್ಳುವುದುದೇನೊಂದು ಇಲ್ಲ. ಆದರೂ, ನೀನು ಕಿವಿಗೊಟ್ಟು ಕೇಳುವೆ, ಅರ್ಥವಾಗದಿದ್ದರೂ, ಅರ್ಥವಾದಂತೆ ಕಿರುನಗೆ ಬೀರುವೆ ಎಂಬುದೇ ನನ್ನ ಭಾವ. ಕಾರಣ, ನೀನು ನನ್ನದೇ ಮನಸ್ಸಿನ ಭಾಗ. ಕಾಲಾನುಗತಿಯಲ್ಲಿ ನಿನ್ನನ್ನೊಗಳುವೆ; ಕ್ಷಣಾರ್ದದಲ್ಲೇ ತೆಗಳುವೆ; ಪ್ರೇಮದ ಕಾವ್ಯಕಲ್ಪನೆಯಲ್ಲಿರಬಹುದು ಅಥವಾ ಮೋಹದ ಮಾಯೆಯಲ್ಲಿರಬಹುದು. ನಾನಾಗಲೇ ನಿನಗೇಳಿದಂತೆ, ಇಲ್ಲಿ ಅರ್ಥಮಾಡಿಕೊಳ್ಳಲು ಏನುಯಿಲ್ಲ ಎಂಬ ಮುಗ್ಧಭಾವ ಆವರಿಸಿದೆ. ಹಾಗಾಗಿ ನುಡಿಯುವೆ, ಒಮ್ಮೆ ಬೆತ್ತಲಾದ ಆಕಾಶವನ್ನು ನೋಡುತ್ತಾ ಕೂತಿದ್ದೆ, ಎರಡು ಗಿಳಿಗಳು ಹಾರಾಡುತ್ತಾ … Read more

ನನ್ನೀ ಆತ್ಮದಲ್ಲಿ ಬೆರೆತವರು ತಾವು: ಅಂಬಿಕಾ ಪ್ರಸಾದ್

ಶೃಂಗಬೀಡು ಸಂಸ್ಥಾನದ ಘನತೆವೆತ್ತ ದೊರೆಯಾದ ಶ್ರೀ ಶ್ರೀ ಶ್ರೀ ಹಯವದನ ನಾಯಕರಲ್ಲಿ ಒಂದು ಗೌಪ್ಯವಾದ ವಿಷಯವನ್ನು ಹಲವು ಬಾರಿ ಯೋಚಿಸಿ ತಿಳಿಸಲು ಇಚ್ಛಿಸುತ್ತಿದ್ದೇನೆ. ಮೊನ್ನೆ ಸೂರ್ಯಾಸ್ತದ ಸಮಯದಲ್ಲಿ ತಂದೆಯವರ ಬಳಿ ನನ್ನ ಹೃದಯದಲ್ಲಿ ನೀವು ಹಿತವಾಗಿ ಬಂದು, ಬಲವಾಗಿ ಅಪ್ಪಿ ಕುಳಿತಿರುವುದರ ಬಗ್ಗೆ ತಿಳಿಸಬೇಕೆಂದು ಬಹಳ ಆತಂಕದಿಂದ, ಸಂಕೋಚದಿಂದ ಒಂದೊಂದೇ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿರಬೇಕಾದರೆ, ನನ್ನ ನೂಪುರದ ಘಲ್ ಘಲ್ ಎಂಬ ನಿನಾದವೇ ಭಯ ಬೀಳಿಸುವಂತೆ ನಿಶ್ಶಬ್ದವಾದ ರಂಗೇರಿದ ಅರಮನೆಯಲ್ಲೆಲ್ಲಾ ಮಾರ್ದನಿಸುತ್ತಿತ್ತು. ಅಂದು ತಾವು ನನಗೆ ಪ್ರೀತಿಯಿಂದ … Read more

ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ: ಶ್ರೀಲಕ್ಷ್ಮೀ ಅದ್ಯಪಾಡಿ

ಒಲವೇ,ಎಷ್ಷೊಂದು ಇಷ್ಟ ಪಡುವೆ ಹೀಗೆ ಕರೆದರೇ. ಬಹಳ ದಿನಗಳಾದವಲ್ಲವೇ ನಿನಗೊಂದು ಪತ್ರ ಬರೆಯದೇ. ಒಲವಿನ ಅನುಭೂತಿಗಳನ್ನು ಅಕ್ಷರಗಳಲ್ಲಿ ಮೂಡಿಸುವುದೇ ಸೊಗಸು. ಇಂದೇಕೋ ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನಪು ಸತಾಯಿಸುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಾಡುವ ನೆನಪುಗಳಿಗೇನು ಗೊತ್ತು ನಿನ್ನ ನನ್ನ ನಡುವೆ ಹಗಲು ರಾತ್ರಿಯ ಅಂತರವಿದೆ ಎಂದು. ಕನಸುಗಳಿಗೇಕೋ ವಾಸ್ತವದ ಜೊತೆ ಕ್ರೂರ ಶತ್ರುತ್ವ. ಅರೆಬರೆ ನಿದ್ದೆಯ ಮಗ್ಗುಲಲ್ಲಿ ನಿನ್ನದೇ ನೆನಪುಗಳ ಸದ್ದಿಲ್ಲದ ರಾಜ್ಯಭಾರ. ಪ್ರೀತಿಯೆಂದರೆ. ಇದೇ ಏನೋ. ನಿತ್ಯ ಬೇಸರವಿಲ್ಲದ ಕಾಯುವಿಕೆ. ಪ್ರತಿದಿನ ಕಣ್ಣು ತೆರೆಯುತ್ತಲೇ ಯಾರು … Read more

ಆ ಗುಲಾಬಿ ಹೂವಿನಮ್ಯಾಲಿನ ಹನಿಯಂಥಾಕಿ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಪ್ರೀತಿಯ ಸಖಿ ಚಿಮಣಾ… ಅಂದು ಸಂಜೆ ತಂಗಾಳಿಯೊಂದಿಗೆ ಮಾತಿಗಿಳಿದು ಮೆಲ್ಲನೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಾಗ ದಾರಿಯಲಿ ಉದುರಿಬಿದ್ದ ಎರಡು ಹಳದಿ ಹೂಗಳನ್ನು ಎತ್ತಿ ನನ್ನ ಕೈಗಿಟ್ಟು ಬಿಡಿಸಿಕೊಂಡು ಬಿದ್ದಿವೆ ಬೀದಿಗೆ ಸಾಧ್ಯವಾದರೆ ಬದುಕಿಸಿಕೊ ಎಂದು ಹೇಳಿದೆಯಲ್ಲ ನಾನಾಗಾ ಸಖತ್ ಸೀರಿಯಸ್ಸಾಗಿ ನಿನ್ನನ್ನು ಪ್ರೀತಿಸಲು ಶುರುಮಾಡಿದ್ದು ನಿಜ. ಮುಂಜಾನೆ ಸೂರ್ಯನ ಕಿರಣಗಳು ಮುಗುಳುನಗುತ್ತ ಮನೆಯಂಗಳಕೆ ಬೆಳಕಿನ ರಂಗೋಲಿ ಇಡುತ್ತಿದ್ದಾಗ ನೀ ಹಾದು ಹೋಗುವ ದಾರಿ ತಿರುತಿರುಗಿ ನನ್ನೆ ದುರುಗುಟ್ಟುತ್ತಿತ್ತು. “ಹೇ ಹಿಂಗೆಲ್ಲ ಕಾದಂಬರಿಯೊಳಗ ಕವನ ಬರದಾಂಗ ಬರದ್ರ ಹೆಂಗ … Read more

ನೀ.. ಈ ಬಿಕ್ಕುಗಳ ಹಕ್ಕುದಾರ: ನಳಿನಿ. ಟಿ. ಭೀಮಪ್ಪ

ಪ್ರೀತಿಸುವ ದಿನ ಹತ್ತಿರ ಬರುತ್ತಿದೆ ಅಂತಾದರೂ ಗೊತ್ತಾ ನಿನಗೆ?…ನನ್ನ ಕರ್ಮ, ಅದನ್ನೂ ನಾನೇ ನೆನಪು ಮಾಡಬೇಕು. ಅನುಕ್ಷಣ, ಅನುದಿನ ನನ್ನನ್ನೇ ಆರಾಧಿಸುತ್ತ, ಪ್ರೀತಿಸುವ ನಿನಗೆ ವರ್ಷಕ್ಕೊಮ್ಮೆ ಆಚರಿಸುವ ಈ ಪ್ರೀತಿಯ ದಿನದ ಬಗ್ಗೆ ನಂಬಿಕೆ ಇಲ್ಲವೆಂದು ಗೊತ್ತು. ಆದರೆ ನನಗೆ ಆ ದಿನ ತುಂಬಾ ಅಮೂಲ್ಯವಾದುದು ಗೊತ್ತಾ? ಪ್ರೀತಿ ಎನ್ನುವ ಪದವೊಂದು ಜೀವನದಲ್ಲಿ ನಿನ್ನ ಮೂಲಕ ಅಂಕುರಿಸಿದ ಘಳಿಗೆಯೊಂದು ಚಿರಸ್ಮರಣೀಯವಾಗಿ, ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಅಭಿಲಾಷೆ ನನ್ನದು. ಅಂದು ನೀ ಕೊಡುವ ಕೆಂಪು ಗುಲಾಬಿಯ ಕಾಣಿಕೆಯನ್ನು, ಕೆಂಪೇರಿದ ಮೊಗದೊಡನೆ … Read more

ಒಲವಿಗೊಂದು ಓಲೆ: ಪೂಜಾ.ಎಲ್.ಕೆ

ಹೇ ಗೆಳೆಯ ಅದೇನ್ ನಿನ್ನ ಕಣ್ಣ ಹೊಳಪು, ಅದೇನ್ ನಿನ್ನ ಕಾಳಜಿ, ಅದೇನ್ ನಿನ್ನ ಭರವಸೆ, ಅದೇನ್ ನಿನ್ ನಂಬ್ಕೆ ಇದೆಲ್ಲದ್ರ ಅರ್ಥ ಖಂಡಿತವಾಗಿಯೂ ಒಲವಲ್ಲವೇ? ಇನಿಯ. ಇಣುಕಿ ಇಣುಕಿ ಹೃದಯದ ಕಿಟಕಿ ತೆಗೆದೆಬಿಟ್ಟೆ ಕೊನೆಗೂ ನೀನು ಸುಳಿವಿಲ್ಲದ ತಂಗಾಳಿಯ ಹಾಗೆ , ಕತ್ಲೇನೆ ಕಂಡಿರದ ದೀಪದ ಹಾಗೆ,ಹೇ ಜಾದುಗಾರ ಅದೇನ್ ಮೋಡಿ ಮಾಡ್ಬಿಟ್ಟೆ ಈ ಬಡಪಾಯಿ ಹೃದಯಕ್ಕೆ, ಪ್ರತಿ ಬಡಿತಕ್ಕೂ ನಿನ್ ಹೆಸರನ್ನೇ ಮಿಡಿಯುತ್ತೆ. ಅಷ್ಟೇ ಅಲ್ಲ ಈ ಹಾಳಾದ್ ಮನಸ್ ಕೂಡ ನಿನ್ನನ್ನೇ ಸದಾ … Read more

ನಿನ್ನವನಲ್ಲದ ಪಾಪಿ ಪ್ರೇಮಿ: ಸಾವಿತ್ರಿ ಹಟ್ಟಿ

ಪ್ರೀತಿಯ ಇವ್ಳೇ, ಕಾಲ ಅನ್ನೂದೇನಾರ ನಮ್ ಕೈಯ್ಯಾಗಿದ್ದಿದ್ರ ಎಳ್ಕೊಂಬಂದು ನಮ್ಮನಿ ಪಡಸಾಲಿ ನಡುಗಂಬಕ್ಕ ಕಟ್ಟಿ ಹಾಕ್ತಿದ್ದೆ ನೋಡು ಹುಡುಗಿ. ಆಗ ಬಹುಶಃ ನಾನು ನೀನು ಸಣ್ಣ ಹುಡುಗ ಹುಡುಗಿ ಆಗೇ ಇರತಿದ್ವಿ. ಶ್ರಾವಣ ಮಾಸ, ಪಂಚಮಿ ದಿನಗೊಳಂದ್ರ ನಿನಗ ಪ್ರಾಣ ಅಲಾ! ನಿನ್ನ ಉದ್ದನ ಜಡಿಗಿ ಬಾಬಿ ರಿಬ್ಬನ್ ಗೊಂಡೆ ಹೆಣಕೊಂಡು, ಚಿತ್ತಾರದ ನಿರಿಗಿ ಲಂಗ ಉಟ್ಕೊಂಡು, ಗಗ್ರಿ ತೋಳಿನ ಪೋಲ್ಕಾ ಹಾಕೊಂಡು, ಆಬಾಲಿ, ಮಲ್ಲಿಗಿ ಕ್ಯಾದಗಿ ಹೂವು ಮುಡ್ಕೊಂಡು ಜೋಕಾಲಿ ಆಡುವಾಗ ನನಗ ಯಾಡ್ ಕಣ್ಣು … Read more

ನೀ ಎದುರಿಗೆ ಬಂದ್ರೆ ಏನೋ ಓಂಥರಾ ಖುಷಿ ಆಕ್ಕೇತಿ!: ಕಾವ್ಯ. ಎನ್

ಲೋ ಹುಡ್ಗ,ಪ್ರೀತಿ ಪ್ರೇಮ ಎಲ್ಲ ನನ್ನಂತ ಹಳ್ಳಿ ಹುಡ್ಗಿಗೆ ಸರಿ ಬರೋದಲ್ಲ, ನನ್ನ ಕೆಲಸ್ ಏನಂದ್ರ ಓದೋದು ಅಷ್ಟೇ ಅಂತಾ ನಿರ್ಧಾರ ಮಾಡಿದ್ ನನ್ಗೆ, ಆ ವಿಸ್ಯಾನೇ ಮರೆಯಂಗೇ ಮಾಡಿದವ ನೀನು? ಅದ್ಯಾಗೆ ನಾನು ನಿನ್ನ ಪ್ರೀತಿಲಿ ಬಿದ್ನೊ ಒಂದು ತಿಳಿತಿಲ್ಲ. ವತ್ತು ಹುಟ್ಟಾದಗ್ನಿಂದ, ವತ್ತು ಬೀಳಾವರೆಗೂ ನಿಂದೆ ಜಪ. ನೀ ಎದುರಿಗೆ ಬಂದ್ರ ಏನೋ ಓಂಥರಾ ಕುಸಿ. ಒಂದು ನಿಮಿಷಕ್ಕೆ 72 ಸಾರಿ ಬಡ್ಕೊಳೋ ಹೃದಯ ನಿನ್ನ ಮೊಗ ಕಂಡಿದ್ ತಕ್ಷಣ ನೂರ್ಸಾರಿ ಬಡಿತೈತೆ. ಆಗ … Read more

ನೀ ಬರುವ ದಾರಿಯಲಿ ಕಂಗಳ ಹಾಸಿ: ಜಯಶ್ರೀ ಭಂಡಾರಿ.

ನಮ್ಮ ಭೇಟ್ಟಿ ಎಷ್ಟು ಅನಿರೀಕ್ಷಿತವಾಗಿ ಆಯಿತು. ಆದರೆ ಪ್ರೀತಿ ತುಂಬಾ ವಿಚಿತ್ರ. ನಿನಗೆ ನೆನಪಿದೆಯಾ ನನ್ನ ಸುಂದರ ಫೋಟೋ ಅದೆಲ್ಲಿ ನೋಡಿದೆಯೋ… ನೀ. ನಿನ್ನಿಂದ ನನ್ನ ಮೇಲಗೆ ಮೆಸ್ಸೇಜ ಬಂತು. ಪ್ಲೀಜ ಮೊಬೈಲ ನಂಬರ ಕಳಿಸಿ ನಿಮಗೆ ಅರ್ಜೆಂಟ ಮಾತಾಡೋದು ಇದೆ ಅಂತ. ನೀನ್ಯಾರೋ ತಿಳಿಯದ ನಾನು ನಿರ್ಲಕ್ಷ್ಯ ಮಾಡಿದೆ. ಮತ್ತೆ ಮತ್ತೆ ನೀ ರಿಪೀಟ ಮಾಡಿದೆ. ಕೂತೂಹಲದಿಂದ ಅಂದು ನನ್ನ ನಂಬರ ಕಳಿಸಿದೆ. ನೀ ಸಣ್ಣಗೆ ನನ್ನೊಳಗೆ ನುಗ್ಗಿದೆ. ಮನಸಲಿ ನೆಲೆ ನಿಂತೆ. ಜೊತೆಯಿಲ್ಲದ ಒಂಟಿ … Read more

“ಬೆಳಕಿನ ಬೆರಗು ನೀನು”: ಮಹಾಂತೇಶ್ ಯರಗಟ್ಟಿ

ಹಾಯ್ ಹೇಗಿದ್ದೀಯಾ…? ಇವತ್ತು ನಿನ್ನದೇ ಇಷ್ಟದ ಹಬ್ಬ ದೀಪಾವಳಿ. ಪ್ರತಿ ದೀಪಾವಳಿಗೊಮ್ಮೆ ಮನದ ಮನೆಯ ದೀಪ ಬೆಳಗಿ ಇಷ್ಟದ ಮಾತುಗಳ ಜೊತೆಗೆ ಕಷ್ಟದ ಕರ್ಮಗಳನ್ನು ತೊರೆದು ನನ್ನ ಮನಸ್ಸನ್ನ ಗಟ್ಟಿ ಮಾಡುತ್ತಿದ್ದೀಯ ನೀನು. ನೀನಿಲ್ಲದ ಮೇಲು ಈಗಲೂ ಹಾಗೆ ಇದ್ದೇನೆ. ದೇವರ ನೆನೆಯೋದನ್ನ ಬಿಟ್ಟು ಸುಮಾರು ವರ್ಷಗಳಾಯಿತು, ಬದಲಿಗೆ ನೀನು ನೆನಪಾಗುತಿ. ಆಸರೆಯ ಅಡಿಪಾಯ ಮುರಿದು ಬಿದ್ದಮೇಲೆ ಶವದ ರೂಪ ತಾಳಿದೆ ಈಗ ಈ ಹೃದಯ. ವರ್ಷದ ಹಬ್ಬಕ್ಕೆ ದೀಪ ಹಿಡಿದು ಶುಭಾಶಯ ಕೋರುವ ನಿನ್ನದೊಂದು ಪುಟ್ಟ … Read more

ಹಂಪೆಯ ಪಳುಯುಳಿಕೆಗಳು, ಪ್ರೇಯಸಿ ಮತ್ತು ನನ್ನ ಹೆಂಡತಿ: ಧೀರೇಂದ್ರ ನಾಗರಹಳ್ಳಿ

ಹಲೋ ಹನಿ , ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ ‘ಅಕ್ಷರಗಳು ‘ ಅಂತ ಆಶ್ಚರ್ಯ ಆಗಬಹುದು. ಈ ಮೇಲಿಗೆ ಒಂದು ಕಾರಣವಿದೆ. ಈ ವಾರಾಂತ್ಯದಲ್ಲಿ ಬಿ. ಬಿ. ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು ನೋಡಿದೆ. ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು. ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ ಹಂಪೆಯ ವಿವರವನ್ನು ಕೊಡಲಾಯಿತು. ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ – ನಾನು ನಿಜವಾಗಿಯೂ ಸತ್ತೆ ಹೋದೆ. ಆ ಸಾಲು ಸಾಲು ಮುರಿದು ಹೋದ … Read more

ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ: ಡಿ ಜಿ ನಾಗರಾಜ ಹರ್ತಿಕೋಟೆ

ನನ್ನೆಲ್ಲಾ ಕೊರತೆಗಳ ನೀಗಿಸಿಬಿಡು. ನಿನ್ನ ಕಣ್ಣಲ್ಲೊಂದು ಪುಟ್ಟ ಹಣತೆಯಿದೆ ನನ್ನೆಲ್ಲಾ ಕನಸುಗಳ ಬೆಳಗಿಬಿಡು. ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ ನನ್ನೊಳಗೊಳಗೆ ಪ್ರೀತಿಯ ಪದಗಳ ಪಯಣ. ಅದೆಂತಾ ಅಮೃತಘಳಿಗೆಯೊ ನಾ ತಿಳಿಯೆ ! ಸಂಬಂಧಿಯ ಮದುವೆಮನೆಯಲ್ಲಿ ಲಂಗ ದವಣಿ ತೊಟ್ಟು, ಮಲ್ಲಿಗೆ ಮುಡಿದು ಉತ್ಸಾಹದಿಂದ ನಲಿದಾಡುತ್ತಿದ್ದ ನಿನ್ನ ನೋಡಿದಾಕ್ಷಣವಂತೂ ಮನಸ್ಸು ಪ್ಯಾರಾಚ್ಯೂಟನಂತಾಗಿಬಿಟ್ಟಿತ್ತು. ಹಸಿಹಸಿ ಹೃದಯದಲಿ ನೀನಿಟ್ಟ ಮೊದಲ ಹೆಜ್ಜೆಗುರುತದು. ನಿನ್ನ ಕಣ್ಣಂಚಿನ ಕುಡಿನೋಟಕ್ಕಾಗಿ,ಮಂದಹಾಸಕ್ಕಾಗಿ ಅದೆಷ್ಟು ಕಾತರಿಸಿದೆನೊ. ನೀ ಸೂಸಿದ ಮಲ್ಲಿಗೆಯ ಮನಸ್ಸಿನ ಘಮದ ಪರಿಮಳ ಮನದಂಗಳದಲ್ಲೆಲ್ಲಾ ಸೂಸಿ … Read more