Facebook

Archive for the ‘ಚುಟುಕ’ Category

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಾಲಿನಿ ಭಟ್ ರವರ ಚುಟುಕಗಳು

  ೧.)   ಹುಚ್ಚುಮನಸು ಕಂಡೂ ಕಾಣದ ಮನದ ಚಿತ್ತದಲ್ಲಿ ಸುಪ್ತವಾಗಿ ಕದಡಿ ನಿಂತಿದೆ, ಯಾರು ಕೇಳದಂತಹ ಕಲ್ಪನೆ ರೂಪ ನೀಡಲಾಗದೆ ಅವಿತಿದೆ.   ೨.)ಸ್ವಾರ್ಥ ಜೀವನದ ಪ್ರತಿಕ್ಶಣನು ಬಯಸುತ್ತೇವೆ ನಮಗಾಗಿ ಒಂದು ಜೀವ ಇರಬೇಕು ಆದರೆ ಯಾವ ಸಮಯವು ಯೋಚಿಸುವುದಿಲ್ಲ ಬೇರೆಯವರಿಗಾಗಿ ನಾವು ಇರಬೇಕು   ೩) ಬದುಕಲ್ಲಿ ದುಃಖವೋ ಸುಖವೋ ಏನುಂಟು ಏನಿಲ್ಲ ಹೇಳಲಾಗದ ಚಿತ್ರಿಸಲಾಗದ ಒಗಟನ್ನು ಬಿಡಿಸುವ ಪರಿ ಏನು?   ೪) ಕಣ್ಣು ಕಾಣದಾದಾಗ ಎಷ್ಟು ವೈಭವ ಇದ್ದರೇನು ಮನಸು ಸೋತಾಗ […]

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ರಾಘವೇಂದ್ರ ಭಟ್ ರವರ ಚುಟುಕಗಳು

  ಕವಿತೆ ಹುಟ್ಟಿದ್ದು : ಭಾವಗಳು ಬತ್ತಿ ಹೋದಾವೆಂದು ಪದೇ ಪದೇ ನಿನ್ನೆದುರಲ್ಲೇ ಕುಳಿತೆ.| ನೀನು ಕಣ್ಣು ಮಿಟುಕಿಸಿ ಆಶ್ಚರ್ಯ ತೋರಿದಾಗಲೆಲ್ಲ ರೂಪುಗೊಂಡಿದ್ದೇ ಈ ಕವಿತೆ ||   ತಾಯಿ : ನಿನ್ನ ಮನದ ಹರಹು ಕಂಡದ್ದು ವಿಶಾಲ ಸಾಗರದೊಡಲಲ್ಲಿ | ವಿಶಾಲ ಸಾಗರದಷ್ಟು ಪ್ರೀತಿ ಉಂಡಿದ್ದು ತಾಯೇ ನಿನ್ನಯ ಮಡಿಲಲ್ಲಿ ||   ನೀ ಹೋಗುವಾಗ.. ಮರಳ ದಂಡೆಯಲಿ ಗೆಜ್ಜೆ ಪಾದಗಳ ಹೆಜ್ಜೆ ಗುರುತುಗಳ ಅಳಿಸಿದೆ | ಎನ್ನ ಹೃದಯದಲಿ ಹಚ್ಚೆ ಮೂಡಿಸಿ ಏಕೆ ಪ್ರೀತಿಯ […]

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಶರತ್ ಚಕ್ರವರ್ತಿ ಚುಟುಕಗಳು

  1. ಕಣ್ಣುಗಳು ನೂರಾರು ತಾರೆಗಳು ಉಲ್ಕೆಗಳಾಗಿ ಉದುರಿದವು ನಿನ್ನ ಕಣ್ ಹೊಳಪಿಗೆ ಸೋತು. 2. ಮಿಂಚು ಬೆಳಕಾಗಿ ಬಾ, ಬೆಳದಿಂಗಳಾಗಿ ಬಾ ಎಂದಾಡಿರೇ.. ಮಿಂಚಾಗಿ ಬಂದಳು ದೃಷ್ಟಿಯನೆ ಹೊತ್ತೊಯ್ದಳು. 3. ಚಳಿ ನವಂಬರ್ ಚಳಿ, ಭಾರವಾದ ಕಂಬಳಿ ಹೊದೆಯಲು ಇಚ್ಚಿಸಿರಲು ನಿನ್ನ ನೆನಪುಗಳು ಬೆಚ್ಚನೆ ಭಿಗಿದಪ್ಪಿದವು. 4. ಹಣತೆ-ಪತಂಗ ಸುಟ್ಟು ಬೂದಿಯಾಗುವೆ ಎಂಬ ಅರಿವಿದ್ದರೂ ಏಕೆ ಎನ್ನನೇ ಸುತ್ತಿ ಸುತ್ತಿ ಬರುತಿರುವೆ.. ನಿನ್ನ ಕೋಮಲ ರೆಕ್ಕೆಗಳ ಸುಡುವ ಮನಸ್ಸಿಲ್ಲದೇ ಇಗೋ.. ನಾನೇ ನಂದಿಹೋಗುತಿರುವೆ. 5. ನೀ […]

ಪಂಜು ಚುಟುಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕೃಷ್ಣಮೂರ್ತಿ ಎನ್. ಅವರ ಚುಟುಕಗಳು

  ಮುಂಜಾವದ ರವಿಯೆನ್ನ ರೆಪ್ಪೆಕದವ ತೆರೆಸಿದ ನಿನ್ನ ಎದುರು ನಿಲಿಸಿ ಪ್ರೀತಿಗೆ ಹೊಸಭಾಷ್ಯವ ಬರೆಸಿದ   ರೆಂಬೆ ಮೇಲೆ ಚೆಂದ ಹಕ್ಕಿ ಮಾಡಿತೆಂಥ ಮೋಡಿ ನಿನ್ನ ನೆನಪ ತರಿಸಿತೆನಗೆ ನಿನ್ನಂತೆಯೇ ಹಾಡಿ   ಹರಿವನದಿಯ ಪುಟ್ಟಮೀನು ಬೀಸಿ ರೆಕ್ಕೆ ಸದ್ದು ನೀನು ಮುಗುಳ್ನಕ್ಕ ಕ್ಷಣದಿ ಗುಳಿಗೆನ್ನೆ ತುಂಬ ಮುದ್ದು   ನಿನ್ನ ಚೆಲ್ವಿಗೆ ಸಾಟಿಯೆಲ್ಲಿ ಕೊಂಚ ಕಮ್ಮಿಯೇ ತಾವು ಎನುತ ನಾಚಿವೆ ಹಸಿರಿನೆದೆಯೊಳು ಅರಳಿ ಮೊಗ್ಗು ಹೂವು   ಬಯಕೆ ಬಿಸಿಗೆ ಕೆಂಪೇರಿದಧರ ಸಂಜೆ ರವಿಯ ತಂಪ್ಸುಡು […]

ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು

ಖುಷಿ ಸಂಜೆ ಸೂರ್ಯನ ಹೆಣದ ಮೆರವಣಿಗೆ ಸಾಗುವಾಗ ಬಾನ ಬೀದಿಯೊಳಗೆ ದುಡಿವ ಜನರ ಗೂಡುಗಳ ದೀಪಗಳಿಗೆ ಉಸಿರು ದಕ್ಕಿ ಪಿಸುಗುಟ್ಟಿ ನಸುನಗುತಾವೆ ಒಳಗೊಳಗೆ.  ಬದುಕು  ದುಡಿಯುವ ಜನರ ಸುಖವು ಕನಸಿನ ತರಹದ್ದು; ಸಂಕಟಗಳ ನತದೃಷ್ಟ ಬದುಕುಗಳಿಗೋ ಹಸಿವಿನ ಸರಹದ್ದು. ಸಹನೆ  ದುಡಿವ ಜನರನ್ನು ನೀವು ಬಿರುಬಿಸಿಲ ಬೆಂಕಿಯಲ್ಲಿ ದಹಿಸಿದರೂ ಸಹಿಸುತ್ತಾರೆ; ಮುಂದೊಮ್ಮೆ  ನೀವೇ ಸುರಿಸುವ ಪ್ರೀತಿ ಮಳೆಗೆ ತೆರೆದುಕೊಳ್ಳುವ ನೆಲವೇ ಆಗುತ್ತಾರೆ! ಸ್ಪಷ್ಟ ಓ ಸೂರ್ಯ, ದುಡಿವ ಜನರ ನೆತ್ತಿಯ ಸುಡುವುದೆಂದರೆ ಯಾಕೆ ನಿನಗೆ ಇಷ್ಟ? ನೀನು […]

ಪಂಜು ಚುಟುಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸುಷ್ಮಾ ಮೂಡುಬಿದರೆ ಅವರ ಹನಿಗವಿತೆಗಳು

ಮೌನ ಮಾತಾಗದ ಹೊರತು ಕಂಬನಿಗಳ ತಡೆಯುವರಿಲ್ಲ ಮಾತು ನೀನಾಗದ ಹೊರತು ದುಮ್ಮಾನಕ್ಕೆ ಅಂತ್ಯವಿಲ್ಲ. ಹುಸಿ ನಿರೀಕ್ಷೆಗಳ  ಜೀವಂತಿಕೆ  ಜೀವಂತ ಕನಸುಗಳಿಗೇಕೆ  ಇರುವುದಿಲ್ಲ.. ?  ಅವಳಿಗೆ ಬೆನ್ನು ಮಾಡಿ  ಈತನೊಂದಿಗೆ ಹೊರಡಲು  ಅಣಿಯಾದಾಗ  ಅಮ್ಮನೆಂಬ ಅವಳ  ಕಣ್ಣಿಂದ ಉದುರಿದ್ದು  ನನ್ನೆಡೆಗಿದ್ದ ಅವಳ ಕನಸುಗಳಾ..?! ಹೆಗಲ ಮೇಲೆ ಮಗಳನ್ನು  ಅಂಬಾರಿ ಕೂರಿಸುವ  ಇವನನ್ನು ನೋಡುವಾಗ  ಮನೆಯ ಮೂಲೆಯ  ಒಂಟಿ ಚಾಪೆಯ ಮುದುಕ, ಅಪ್ಪನ ನೆನಪಾಗುತ್ತದೆ..!  ನಾ ಸಿಕ್ಕಿ ನಿನ್ನ ಕಾಡಿಸುವುದಕ್ಕಿಂತ ಸಿಗದೇ ನೀನೇ ಕಾಡಿಸಿಕ್ಕೊಳ್ಳುವುದು ಚಂದ ಅಲ್ಲವೇನೋ..?! ಕಣ್ಣೋಟಕ್ಕೆ , […]

ಮೂವರ ಚುಟುಕಗಳು: ಶಂಕರ್ ಕೆಂಚನೂರು, ಪ್ರತಾಪ್ ಬ್ರಹ್ಮವಾರ್, ರಾಜಶೇಖರ (ಬಂಡೆ)

ಪರಿತ್ಯಕ್ತರು ಆ ಅರಳಿ ಕಟ್ಟೆಮೇಲೆ ಒಂದಷ್ಟು ಜನ ಹಿರಿಯರು, ಇನ್ನೊಂದು ಕಡೆ ಗಾಜು ಒಡೆದಿದ್ದಕ್ಕೆ ಚಿತ್ರ ಮಾಸಿದ್ದಕ್ಕೆ ಪೂಜೆಯ ಅರ್ಹತೆ ಕಳೆದುಕೊಂಡ ದೇವರ ಫೋಟೋಗಳು -ಶಂಕರ್ ಕೆಂಚನೂರು ಅನಾಥ ನಿರೀಕ್ಷೆ ತುಕ್ಕು ಹಿಡಿದ ತಕ್ಕಡಿಯಂತ ಹೃದಯವನ್ನಾ  ಅದ್ಯಾರದೋ ಮನಸ್ಸಿಗೆ ತೂಕಕಿಟ್ಟೆ   ಅದೂ ಪಕ್ಕಾ ವ್ಯಪಾರಿ  ತೂಕಿಸಿಕೊಂಡು  ಮತ್ತೆ ಕೆಲಸಕೆ ಬರದ ತಕ್ಕಡಿಯೆಂದು ನನ್ನತ್ತ ತಳ್ಳಿತು  ಅನಾಥ ಹೃದಯ ಮತ್ತೆ ಎತ್ತಿಕೊಳುವ  ಮನಸಿಗೆ ಕಾಯುತಿಹುದು ಶಬರಿ ಕಾದಂತೆ   -ಪ್ರತಾಪ್ ಬ್ರಹ್ಮವಾರ್   ಬಂಡೆಯ ಚುಟುಕಗಳು ಮುಳುಗಡೆಗೆ […]

ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

  ದನಿಯಾಗದ ಹನಿಗಳು  ೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ  ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ  ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…!     ೨. ದುಃಖ ಸತ್ಯಗಳು  ನನ್ನ ನೋಡಿ  ನಗುತಿದೆ; ದುಃಖ ಮರೆಯಲು  ನಾನೂ..!     ೩. 'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?'  ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ. 'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'   ಉತ್ತರಿಸಿತು ಕಣ್ಣು.     ೪. ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ  ಮರದ […]

ಇಬ್ಬರ ಚುಟುಕಗಳು: ಪೂರ್ಣಿಮಾ.ಬಿ., ಮಂಜುನಾಥ್.ಪಿ.

ಅವಳಿಗೆ ಹೇಳಬೇಕೆಂದು ಪೋಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು. ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ. ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ. ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿಳಿದಾಕ್ಷಣ ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು. ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು. ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು. ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ […]

ಇಬ್ಬರ ಚುಟುಕಗಳು

  ನಿಸ್ವಾರ್ಥ.. ಒಕ್ಕಲಿಗ ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ನೆರಳಾಗಿ ನಿಂತಿದೆ ದಣಿದ ದೇಹಕೆ ಯಾವ ಭೇದವನ್ನು ತೋರದೆ ಫಲ! ಭೂ ತಾಯಿ ಕೊಟ್ಟ ನೀರಿಂದ ರೈತ ಸುರಿಸಿದ ಬೆವರಿಂದ ಫಲಸಿಕ್ಕಿತು! ಹೊಟ್ಟೆಗೆ ಅನ್ನ ಜೊತೆಗೆ ಮುಚ್ಚಿಕೊಳ್ಳಲು ಮಾನ!! -ಮಂಜು ವರಗಾ   ಕಣ್ಣೀರು ಅತ್ತುಬಿಡು ಎಂದಾಗ,  ಬರದ ಹನಿ, ಅಳಬೇಡ ತಡೆಯೆಂದಾಗ, ಉಕ್ಕಿ ಹರಿವ ಧಾರೆ!! ಹೃದಯ ಇದ್ದಾಗ,  ಕೊಂಚವೂ ಗೋಚರಿಸದ , ತನ್ನನ್ನೇ ಕೊಟ್ಟು ಬರಿದಾದ ಮೇಲೆ,  ಭಾರ ತೋರುವ,  ಏಕೈಕ  ವೈಚಿತ್ರ್ಯ!! […]