Facebook

Archive for the ‘ಲೇಖನ’ Category

ಜೀವನವೊಂದು ಮುರಳಿ- ಸುಖ ಸಂತೋಷ ತರಲಿ: ಎಂ.ಎನ್.ಸುಂದರ ರಾಜ್

ದೀಪಾವಳಿ ಅಂದರೆ ಸಾಕು, ಮಕ್ಕಳು ಪುಳಕಿತಗೊಳ್ಳುತ್ತಾರೆ, ಹಿರಿಯರು ಸಂಭ್ರಮಿಸುತ್ತಾರೆ. ಏಕೆಂದರೆ, ಇದೊಂದು ಬೆಳಕಿನ ಹಬ್ಬ, ಅಜ್ಞಾನವೆಂಬ ಕತ್ತಲನ್ನು ಪರಿಹರಿಸಿ, ಜ್ಞಾನದ ಬೆಳಕನ್ನು ನೀಡುವ ದಿವ್ಯ ಸಂದೇಶವೇ ದೀಪಾವಳಿ. ಈ ಹಬ್ಬದ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಅವಶ್ಯಕ. ಶ್ರೀ ರಾಂಜಿ ಜೈನ್ ಎಂಬ ಆಧ್ಯಾತ್ಮಿಕ ಗುರುಗಳು ದೀಪಾವಲಿಯ ಸಂದರ್ಭದಲ್ಲಿ ಒಂದೆಡೆ ಮಾತನಾಡುತ್ತಾ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಿದ್ದಾರೆ. ಜೀವನ ಹೂವಿನ ಹಾಸಿಗೆಯಲ್ಲ, ಅದೊಂದು ಸಮಸ್ಯೆಯ ಗೂಡು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಜೀವನದ ಎಲ್ಲ […]

ನಮ್ಮೆಲ್ಲರ ಸಿಪಿಕೆ- ಎಂಬತ್ತರ ಮೊಹಬತ್ತು!: ಡಾ. ಹೆಚ್ ಎನ್ ಮಂಜುರಾಜ್

ಸಿಪಿಕೆ ಮತ್ತು ಅವರ ಕಾವ್ಯ ಕುರಿತ ಬರಹ ಅಪ್ರತಿಮ ವಿದ್ವತ್ತು; ಮಾತೋ ವಿದ್ಯುತ್ತು ! ಸಿಪಿಕೆಯವರನ್ನು ಬಲ್ಲ ಯಾರಿಗೂ ಅನಿಸುವ ಸತ್ಯವಿದು. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ ಪಿ ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯದ ಹೆಮ್ಮೆಯ ಆಸ್ತಿ. ಹಳೆಯ ಮೈಸೂರು ಪ್ರಾಂತ್ಯದ ಸತ್ತ್ವ ಮತ್ತು ಸ್ವತ್ವ. ಇವರು ತಮ್ಮೆಲ್ಲ ಚೈತನ್ಯವನ್ನು ಸಾಹಿತ್ಯ ಕೃಷಿಗೆ ಮುಡಿಪಿಟ್ಟವರು. ಕನ್ನಡ ಸಾಹಿತ್ಯ ಸೇವೆಯೇ ಅವರ ಮತ್ತೊಂದು ಹೆಸರು; ಬರೆವಣಿಗೆ ಅವರ ಉಸಿರು. ಕನ್ನಡ, ಇಂಗ್ಲಿಷ್ […]

ಕನ್ನಡದ ಕಣ್ಮಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಂದೆ ತಾಯಿಗೆ ತಮ್ಮ ಮಗ ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಇಂಗ್ಲೀಷ್ ಮಾತನಾಡುತ್ತಾ ದೊಡ್ಡ ಅಧಿಕಾರಿಯಾಗಿ ದೊಡ್ಡ ಪಟ್ಟಣದಲ್ಲಿ ದೊಡ್ಡ ಭಂಗಲೆಯಲ್ಲಿದ್ದು ಎಲ್ಲರ ಹತ್ತಿರ ಸೆಲ್ಯೂಟ್ ಹೊಡೆಸಿಕೊಳ್ಳುತ್ತಾ ಕಾರಲ್ಲಿ ಓಡಾಡಬೇಕಂತ ಕನಸು. ನನಸು ಮಾಡಿಕೊಳ್ಳಲು ಹಳ್ಳಿಯ ಕನ್ನಡ ಶಾಲೆ ಬಿಡಿಸಿ ಪೇಟೆ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಅವನಿಗೂ ಪೇಟೆ ಬಣ್ಣಬಣ್ಣದ ತಳುಕುಬಳುಕಿನ ಬದುಕು ಖುಷಿ! ಹೊಸ ಶಾಲೆ, ದೊಡ್ಡ ಸುಂದರ ಆಕರ್ಷಕ ಕಟ್ಟಡ , ಮನಸ್ಸೆಳೆಯುವ ವಾತಾವರಣ, ಶಿಸ್ತಾಗಿ ಬೆಳೆಸಿದ ಕೈತೋಟ, ಸ್ಮಾರ್ಟ್ ಕ್ಲಾಸ್ ಗಳು, ಸೈನ್ಸ್ ಲ್ಯಾಬು, […]

ಕಲೆಗೋಸ್ಕರ ಜೀವನವನ್ನೆ ಮುಡಿಪಾಗಿಟ್ಟ ಅಮಟೂರ ದಂಪತಿಗಳು: ಅಶ್ಫಾಕ್ ಪೀರಜಾದೆ, ಧಾರವಾಡ

ಧಾರವಾಡ ಜಿಲ್ಲೆ ಮತ್ತು ತಾಲೂಕೀನ ಹಾರೋಬೆಳಡಿ ಗ್ರಾಮದ ವಾಸಿಗಳಾದ ವೀರಬಸಪ್ಪ ಅಮಟೂರ ಇವರು ವೃತ್ತಿಯಿಂದ ರೈತರಾದರು ದೊಡ್ಡಾಟ ಕಲಾವಿದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ವೀರಬಸಪ್ಪನ್ನವರು ದೋಡ್ಡಾಟದಲ್ಲಿ ಸ್ತ್ರೀ ಪಾತ್ರ ಮಾಡುವದರಲ್ಲಿ ನಿಷ್ಣಾತರು. ಅವರ ಅಭಿನಯಕ್ಕೆ ಮನಸೋಲದ ಕಲಾಸಕ್ತರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರು ಮುಖಕ್ಕೆ ಬಣ್ಣಬಳಿದುಕೊಂಡು ಸ್ತ್ರೀಪಾತ್ರದಲ್ಲಿ ಅಭಿನಯಸಲು ನಿಂತರೆಂದರೆ ಸಾಕು ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗುತ್ತದೆ. ಅವರ ಭಾವಾಭಿನಯವಂತೂ ಕಣ್ಣಲ್ಲಿ ನೀರು ಬರಿಸುವಂಥದ್ದು. ಸ್ಪುರದ್ರೂಪಿಯಾದ ವೀರಬಸಪ್ಪಗೆ ಅವರ ಶರೀರ ಮತ್ತು ಶಾರೀರಗಳೇ ಸಂಪತ್ತು. ತಮ್ಮ […]

ಬರೆಯುವುದು ಹೇಗೆ?: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು […]

ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ

ಮಹಾ ಶರಣ ಹರಳಯ್ಯ ಪಾರಪಯ್ಯ ಹೊನ್ನಮ್ಮ ದಂಪತಿಗೆ ದವಣದ ಹುಣ್ಣಿಮೆಯೆಂದು ಬಿಜಾಪೂರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಹರಳಯ್ಯನದಾಗಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ […]

ಮನುಷ್ಯನಿಗಿರಲಿ ಮಾನವೀಯತೆ: ತುಳಸಿ ನವೀನ್. ಬೆಂಗಳೂರು

ಮಾನವೀಯತೆಯು ಹುಟ್ಟಿನಿಂದಲೇ ಬರುವಂತದ ಗುಣ. ಆದರೆ ನಾವು ಬೆಳೆಯುವ ಪರಿಸರ,ವ್ಯವಹರಿಸುವ ಜನರು, ಅವರ ಮನಸ್ಥಿತಿಯಿಂದ ಬದಲಾಗುತ್ತಾ ಹೋಗುತ್ತದೆ. ಮುಗ್ಧತೆ ಮಾಯವಾಗಿ ಕುಕೃತ್ಯಕ್ಕೆ ತಿರುಗುತ್ತದೆ. ಮತ್ಸರ,ದ್ವೇಷ ಮನಸ್ಸಿನಲ್ಲಿ ಮನೆಮಾಡುತ್ತದೆ. ಆಸೆ-ದುರಾಸೆ ಲಾಲಸೀತನ ಮೈದಳೆಯುತ್ತದೆ. ನೀವು ಗಮನಿಸಬಹುದು, ಶಾಲಾ-ಕಾಲೇಜಿನಲ್ಲಿ ಪುಟ್ಟಪುಟ್ಟ ಮನಸ್ಸುಗಳು, ಮುಗ್ಧ ಮನಸ್ಸುಗಳೆಲ್ಲವೂ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸ್ವಚ್ಛಂದವಾಗಿ ಸ್ನೇಹಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ಪರಸ್ಪರ ಪ್ರೀತಿ, ಸ್ನೇಹ, ಸಹಾಯ ಮಾಡಿಕೊಂಡು ಸಂತೋಷದಿಂದ ಜೀವನ ಕಳೆಯುತ್ತಾ ಇರುತ್ತಾರೆ. ಆ ಮನಸ್ಸುಗಳಲ್ಲಿ ಯಾವುದೇ ಬೇಧಭಾವದ ಕಪ್ಪುಚುಕ್ಕೆಗಳಿರುವುದಿಲ್ಲ. ಅದೇ ಕಾಲೇಜು ಜೀವನದಿಂದ […]

ಟ್ರಿಣ್ ಟ್ರಿಣ್ . . . . . . . ದಾರಿಬಿಡಿ: ಸಂಗೀತ ರವಿರಾಜ್

ಸೈಕಲ್ ತುಳಿಯುತ್ತ, ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ, ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ, ಮೂರು ಕತ್ತೆ ವಯಸ್ಸಾಗಿ, ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು. ಬಾಲ್ಯದ ಬಾಗಿಲಲ್ಲಿಯೆ ಕಲಿತ ಸೈಕಲ್ ಸವಾರಿ, ಈಗಲು ನನ್ನ ಕಾಲತುದಿಯಲ್ಲಿ ಅದೇ ಆಸಕ್ತಿಯಿಂದ ಕುಳಿತಿದೆ ಅಂದರೆ ನನಗೆ ನಾನೆ ಪರಮಾಶ್ಚರ್ಯಗೊಳ್ಳುತ್ತೇನೆ. ಮನೆಗೆ ಯಾರಾದರೂ ಸೈಕಲಲ್ಲಿ ಬಂದರೆ, ಅಥವ ನಾವು ಹೋದ […]

ಕಗ್ಗದ ಅರ್ಥ ವಿವರಣೆ: ಜಗದೀಶ್ ಅಚ್ಚುತರಾವ್

ಧರೆಯ ಬದುಕೇನದರ ಗುರಿಯೇನು ಫಲವೇನು? । ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು? – ಮಂಕುತಿಮ್ಮ ॥ ೨೭ ॥ ಈ ಕಗ್ಗದಲ್ಲಿ ಡಿ.ವಿ.ಜಿ. ಬದುಕಿನ ಗುರಿ ಏನು ನಾವು ಬದುಕುವ ದಿನದ ಬದುಕಿಗೆ ಏನಾದರೂ ಅರ್ಥವಿದೆಯೇ ಎಂಬುದಾಗಿ ಪ್ರಶ್ನಿಸುತ್ತಾರೆ. ಮಾನವನ ಬದುಕಿಗೆ ಗುರಿಯಿರದೆ ಬಹಳಷ್ಟು ಜನ ಬದುಕಿರುತ್ತ ಇರುತ್ತಾರೆ. ದೇವರು ನಮಗೆ ಮಾನವ ಜನ್ಮ ಕೊಟ್ಟಿರುವುದು ವ್ಯರ್ಥ ಮಾಡುವುದಕ್ಕೆ ಅಲ್ಲ. ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ […]

ನಿಂತಲ್ಲೇ ಎಲ್ಲವೂ ಆಗಬೇಕು: ಕೆ.ಪಿ.ಎಮ್. ಗಣೇಶಯ್ಯ,

ಎಲ್ಲಾದರೂ ಉಂಟೆ..? ನಿಂತಲ್ಲೇ ಎಲ್ಲವೂ ಆಗಬೇಕು ಅಂದ್ರೆ..? ನಿಮಗೆಲ್ಲೋ ತಲೆ ಕೆಟ್ಟಿರಬೇಕು, ಇಲ್ಲಾ ಯಾರೋ ತಲೆಗೆ ತುರುಕಿರಬೇಕು. ಏನಂತ..? ನೀನು ಈಗಿಂದೀಗ ಅದು ಆಗಬೇಕು ಅಷ್ಟೆಯಾ..! ಎಲ್ಲಿಯಾದರೂ ಉಂಟೆ..? ನೆಚ್ಚಿಕೊಂಡ ಕ್ಷೇತ್ರದ ಬಗ್ಗೆ ಮಾಹಿತಿ, ತರಬೇತಿ, ಮಾರ್ಗದರ್ಶನ, ಅಭ್ಯಾಸ ಹೀಗೆ ಏನನ್ನೂ ಪಡೆಯದೆ, ಇದ್ದಕ್ಕಿದ್ದ ಹಾಗೆ ಎಲ್ಲವೂ ನನ್ನದಾಗಬೇಕು ಅಂದರೆ ಹೇಗೆ ಸಾಧ್ಯ.? ಮುಖವಾಡದ ಮುಖಗಳನ್ನು ಹೊತ್ತ ಮುಖಗಳಿಗೆ ನಿಜವಾದ ಮುಖಗಳ ಪರಿಶ್ರಮ, ಗೊತ್ತಿದ್ದರೂ ಅವುಗಳನ್ನು ಹಿಂದಕ್ಕೆ ನೂಕಿ, ನಾನೂ ಅವನಂತೆ, ನನ್ನನ್ನು ಒಪ್ಪಿಕೊಳ್ಳಿರಿ ಎಂದು ದುಂಬಾಲು […]