Facebook

Archive for the ‘ಲೇಖನ’ Category

ಮಕ್ಕಳನ್ನು ಕೇವಲ ಮುದ್ದುಮಾಡಿ ಬೆಳೆಸಬೇಡಿ ಮೌಲ್ಯಗಳನ್ನೂ ಬೆಳೆಸಿ: ಶ್ರೀ ಜಗದೀಶ ಸಂ.ಗೊರೋಬಾಳ

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತು ಸತ್ಯವಾದರೂ ಇಂದಿನ ಮಕ್ಕಳಿಗೆ ನಾವು ಅವರಿಗೆ ಮುಂದೆ ಬೇಕಾಗುವುದನ್ನು ಕೊಡಬೇಕು ಅಲ್ವಾ? ಕೇವಲ ಸಸಿನಟ್ಟು ಅದರ ಫಲಕ್ಕೆ ಆಸೆಪಟ್ಟರೆ ಹೇಗೆ? ಅದನ್ನು ದಿನಂಪ್ರತಿ ನೀರು ಗೊಬ್ಬರ ಹಾಕಿ ಪೋಷಿಸಿದಾಗ ಮುಂದೊಮ್ಮೆ ಅದರಿಂದ ಫಲ ನಿರೀಕ್ಷಿಸಬಹುದು. ಹಾಗೆಯೇ ನಮ್ಮ ಶಾಲಾ ಮಕ್ಕಳನ್ನು ಬೆಳೆಸಬೇಕಿದೆ. ಮಕ್ಕಳ ಬಗ್ಗೆ ಹಲವು ಶಿಕ್ಷಕರ ಅಭಿಪ್ರಾಯಗಳು ಹೀಗಿರಲೂಬಹುದು : “ಇಂದಿನ ಮಕ್ಕಳಿಗೆ ಹಿರಿಯರೆಂದರೆ ಗೌರವವೇ ಇಲ್ಲ”, “ನನ್ನ ಕ್ಲಾಸ್ ಮಕ್ಕಳು ಹಾಳಾಗಿವೆ!”, “ನಾನು ಎಷ್ಟ್ ಅರಚಿದರೂ […]

ಸುಂದರ ಊರಿನಲ್ಲೀಗ …: ಸ್ಮಿತಾ ಅಮೃತರಾಜ್. ಸಂಪಾಜೆ

ನಿಮ್ಮ ಊರು ಅದೆಷ್ಟು ಚೆಂದ; ನೀವೆಲ್ಲಾ ಪುಣ್ಯವಂತರು ಕಣ್ರೀ, ಸ್ವರ್ಗ ಅಂದರೆ ಇದೇ ನೋಡಿ. ಅಲ್ಲಿಯ ಬೆಟ್ಟ,ಗುಡ್ಡ,ನದಿ ,ಧುಮ್ಮುಕ್ಕಿ ಹರಿಯುವ ಜಲಧಾರೆ, ತುಂತುರು ಜುಮುರು ಮಳೆ..ನೆಮ್ಮದಿಯಿಂದ ಬದುಕೋದಿಕ್ಕೆ ಇನ್ನೇನು ಬೇಕು ಹೇಳಿ?. ನಾವೂ ನಿಮ್ಮೂರಿನಲ್ಲೇ ಬಂದು ಠಿಕಾಣಿ ಹೂಡ್ತೀವಿ, ಕೆಲಸಕ್ಕೆ ಜನ ಇಲ್ಲ ಅಂತೀರಿ ನಾವೇ ಬಂದು ಬಿಡ್ತೀವಿ, ನಮಗೆ ನಿಮ್ಮ ತೋಟಗಳಲ್ಲಿ ಕೆಲಸ ಕೊಟ್ರೆ ಅಷ್ಟೇ ಸಾಕು . ಈ ಬಯಲು ಸೀಮೆಯ ಒಣ ಹವೆ, ರಾಚುವ ಬಿಸಿಲು, ಇವೆಲ್ಲಾ ಅನುಭವಿಸಿ ಸಾಕಾಗಿ ಹೋಗಿದೆ ಅಂತ […]

ನಮ್ಮ ದಸರಾ Exhibition ಸವಾರಿ: ವಿಭಾ ಶ್ರೀನಿವಾಸ್

“Exhimition…Exhimition…” ಪದವನ್ನು ಸರಿಯಾಗಿ ಉಚ್ಚರಿಸಲೂ ಬಾರದ ಆ ದಿನಗಳಲ್ಲಿ ವರ್ಷಕ್ಕೊಮ್ಮೆ ಎದುರಾಗುತಿದ್ದ ಸ೦ತಸವೇ ಮೈಸೂರು ದಸರಾ Exhibition (ದಸರಾ ವಸ್ತುಪ್ರದರ್ಶನ). ಎಲ್ಲಾ ವರ್ಗದ, ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ಕಾಣಸಿಗುತಿದ್ದ mini world !! ಪ್ರವೇಶ ಟಿಕೆಟ್ ನ ದರ ರೂ5 ಇದ್ದ ಕಾಲ. ನಾ ಮುಂದು ತಾ ಮುಂದು ಎ೦ದು ಟಿಕೆಟ್ ಪಡೆದು, ಮುಖ್ಯದ್ವಾರದ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿ ಹಲ್ಲುಕಿರಿದ ನ೦ತರವೇ ಪ್ರವೆಶಿಸಿದೆವೆ೦ಬ ಖುಷಿ. ಮು೦ದಿನ ೨-೩ ಗಂಟೆಗಳ ಕಾಲ ಅಣ್ಣ/ಚಿಕ್ಕಪ್ಪನ ಮಗಳ ಕೈ ಹಿಡಿದೇ […]

ಕಾಯಕಲ್ಪವಾಗಿ ಪ್ರವಾಸೋದ್ಯಮ: ಎಂ.ಎಚ್.ಮೊಕಾಶಿ

“ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಗಾದೆ ಮಾತಿದೆ. ಇದು ತನು ಮನದ ಜ್ಞಾನಕ್ಕಾಗಿ ನಮ್ಮ ಹಿರಿಯರು ಹೇಳಿದ ಮಾತಾಗಿದೆ. ಅನುಭವ, ತನ್ಮೂಲಕ ಅನುಭಾವಕ್ಕೆ ಬಾರದ ಜ್ಞಾನವನ್ನು ಪುಸ್ತಕದ ಬದನೇಕಾಯಿ ಎಂದು ಹೇಳುವುದೂ ಇದೆ. ಒಂದೇ ಒಂದು ಸುತ್ತಾಟ ಪುಸ್ತಕ ನೀಡುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ನೀಡುವುದೆಂಬುದು ಅನುಭವದ ಮಾತಾಗಿದೆ. “ವಿಶ್ವ ಒಂದು ಪುಸ್ತಕವಿದ್ದಂತೆ, ಸುತ್ತಾಡಲಾರದವ ಯಾವ ಜ್ಞಾನವನ್ನೂ ಗಳಿಸಲಾರ” ಎಂದು ಸೇಂಟ್ ಆಗಸ್ಟಿನ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು 1980 ರಿಂದಲೂ […]

ಅಸಹಾಯಕತೆ: ನಾವೆ

ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ […]

ನಿಯತ್ತಿಗೆ ಮತ್ತೊಂದು ಹೆಸರೇ ಹನುಮಂತಣ್ಣ: ಜೆಪಿ.ಅಡೂರ್

ಎಪ್ಪ ಏನೋ ಇದು ಅಷ್ಟೊಂದು ದೊಡ್ದುದು ಗುಡ್ಡ ಇದ್ದಂಗೆ ಇದೆಯಲ್ಲೋ ಮಾರಾಯ ಅಂದ ನಮ್ಮ ಹನುಮಂತಣ್ಣ ಜೆರೋಸಿಕ್ ಪಾರ್ಕ್ ಸಿನಿಮಾನ ಟಿವಿ ನಲ್ಲಿ ನೋಡುತ. ಹೇ ಹನುಮಂತಣ್ಣ ಅಂತವು ಎರಡು ತರೋನು ನಾವು ಹೊಲ ಹಸನು ಮಾಡೋಕೆ ಬರುತ್ತೆ ಅಂದೆ ಅದಕೆ ಥಟ್ಟಂತ ಉತ್ತರ ಬಂತು ಹನುಮಂತಣ್ಣನಿಂದ “ಬೇಡ ಚಿಕ್ಕ ಧಣಿಯಾರೇ ನಮಗೆ ತಿನ್ನಾಕೆ ಏನು ಸಿಗ್ತಿಲ್ಲಾ ಈ ಮಳೆ ನಂಬಕಂಡು ಇರೋ ಎರಡು ಎತ್ತು ಸಾಕೋದಕ್ಕೆ ಅವರ ಕಾಲು ಇವರ ಕಾಲು ಹಿಡಿದು ಮೇವತಗೊಂಡು ಬರ್ತಾಇದಿವಿ” […]

ಮಹಿಳಾ ಸಬಲೀಕರಣದತ್ತ…!: ನಸ್ರೀನ್. ಮೈ. ಕಾಖಂಡಕಿ

ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ. ಮಹಿಳೆಯರ ಸಾಮಥ್ರ್ಯವನ್ನು ಇದಕ್ಕಿಂತ ಸರಿಯಾಗಿ ಬಣ್ಣಿಸುವ ಹೇಳಿಕೆ ಬೇರೊಂದಿಲ್ಲ ಎನ್ನಬಹುದು. ಇದು ಸಾಂಪ್ರದಾಯಿಕ ಕ್ಷೇತ್ರವಾಗಿರಲಿ ಅಥವಾ ಆಧುನಿಕ ರಂಗವಿರಲಿ, ಮಹಿಳೆ ತನ್ನ ಛಾಪು ಮೂಡಿಸದ ಕ್ಷೇತ್ರವೇ ಇಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಭವಿಷ್ಯದ ಭವ್ಯ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಪ್ರಾಥಮಿಕ ಜವಾಬ್ದಾರಿ ಯಾವಾಗಲೂ ಅಮ್ಮನದೇ ಆಗಿದೆ. ನಾರಿ, ಮಗಳು, ಅಕ್ಕ, ತಂಗಿ, ಹೆಂಡತಿಯಾಗಿಯೂ ಪುರುಷರ ಬೆನ್ನೆಲುಬಾಗಿದ್ದಾಳೆ. ಆಧುನಿಕ ರಂಗದಲ್ಲಿ ಪ್ರಶಿಕ್ಷಕರಾಗಿ, ಪ್ರಬಂಧಕರಾಗಿ, ರಾಜಕೀಯ ಧುರೀಣೆಯಾಗಿ ಪ್ರಮುಖ […]

ಮರೆಯಲಾಗದ ಬಂಧುಗಳು: ವೆಂಕಟೇಶ ಚಾಗಿ

ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ದೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು […]

ಈ ಹುಚ್ಚುವಿಗೆ ಯಾವುದು ಮದ್ದು?:  ಸ್ಮಿತಾ ಅಮೃತರಾಜ್. ಸಂಪಾಜೆ

ಅನ್ವರ್ಥ ನಾಮಕ್ಕೆ ವೈದ್ಯ, ವಿದ್ವಾಂಸ, ವ್ಯಾಪಾರಿ ಹೀಗೆ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಹಾಗೆಯೇ ಒಂದಷ್ಟು ಮಿನಿ ಕವಿತೆ, ಚುಟುಕು ಅಂತ ಎರಡು ಸಾಲು ಗೀಚಿದ ಕವಿಗಳಿಗೆ ಕೂಡ ಅವರ ವಿಳಾಸದ ಕೆಳಗೆ ಅವರಿಗೂ ಗೊತ್ತಿಲ್ಲದಂತೆ ‘ಕವಿಗಳು’ ಅಂತ ಅನ್ವರ್ಥಕ ನಾಮವೊಂದು ತಗಲಿ ಹಾಕಿಕೊಂಡು ಬಿಡುತ್ತದೆ. ಇದನ್ನು ನಾನು ಯಾಕೆ ಉದಾಹರಿಸುತ್ತಿರುವೆನೆಂದರೆ ಕೆಲವೊಂದು ಪರ್ಯಾಯ ಹೆಸರುಗಳು ನಮಗೆ ಅದು ಹೇಗೋ  ಜಿಗುಟು ಜಿಗುಟು ಮೇಣದಂತೆ ಅಂಟು ಹಾಕಿಕೊಂಡು ಬಿಡುತ್ತದೆ. ಮತ್ತೆ ನಾವು ಬಿಟ್ಟರೂ ಅದು ನಮ್ಮನ್ನು ಬಿಡದಂತೆ […]

ಗುರುವೆಂಬುದು ಅತಿಭೌತಿಕ ಶಕ್ತಿ: ಶ್ರೀ.ಎಂ.ಎಚ್.ಮೊಕಾಶಿ

ಸಮಾಜದಲ್ಲಿ ಅನೇಕ ವೃತ್ತಿಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಶಿಕ್ಷಕ ವೃತ್ತಿಯಾಗಿದೆ. ಶಿಕ್ಷಕನನ್ನು ಬೋಧಕ, ಅಧ್ಯಾಪಕ, ಮೇಷ್ರು, ಗುರು, ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಗುರುವನ್ನು “ಆಚಾರ್ಯ ದೇವೋಭವ”ಎನ್ನಲಾಗಿದೆ. ಅಂದರೆ ದೇವರ ಸ್ಥಾನ ಮಾನ ನೀಡಲಾಗಿದೆ. ಗುರು “ಸಂಸ್ಕøತಿಯ ಪ್ರಗತಿಯ ಅಗ್ರಧೂತ”, ”ರಾಷ್ರ ನಿರ್ಮಾತೃ”, ”ಇತಿಹಾಸದ ನಿರ್ಮಾಪಕ” ಕೂಡ ಆಗಿದ್ದಾನೆ. ಗುರು ಮಗುವಿಗೆ ದ್ವಿತೀಯ ಜನ್ಮದಾತನಾಗಿದ್ದಾನೆ. ಹೀಗಾಗಿ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನಮಾನ ನೀಡಲಾಗಿದೆ. ಗುರು ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು […]